ಡೆಥ್ ಸರ್ಟಿಫಿಕೇಟ್” ಚಿತ್ರೀಕರಣ ಮುಕ್ತಾಯ

Death Certificate” filming completes


ಬೆಂಗಳೂರು : ಶ್ರೀಗೌರಿ ಕಂಬೈನ್ಸ್ ಇವರ ಮೂರನೆಯ ಕಾಣಿಕೆ ‘ಡೆಥ್ ಸರ್ಟಿಫಿಕೆಟ್’ ಚಲನಚಿತ್ರದ ಚಿತ್ರೀಕರಣವು ಸದ್ದಿಲ್ಲದೆ ಭರದಿಂದ ಸಾಗಿ ಮುಕ್ತಾಯಗೊಂಡಿದೆ.
ಸಿದ್ದನಕೊಳ್ಳದ ಪೂಜ್ಯಶ್ರೀ ಡಾ. ಶಿವಕುಮಾರ ಸ್ವಾಮೀಜಿ ಕ್ಯಾಮರಾ ಚಾಲನೆ, ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ವೀರಶೈವ ಲಿಂಗಾಯತ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಮಾನ್ಯ ವಿಜಯಾನಂದ ಕಾಶಪ್ಪನವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಉತ್ತರ ಕರ್ನಾಟಕದ ನೈಜ ಭಾಷೆ, ವಾಸ್ತವಿಕ ಕಥಾಹಂದರ, ಗ್ರಾಮೀಣತೆಯ ಸೊಗಡು, ಮೇಕಪ್ ರಹಿತ ಕಲಾವಿದರು ಮುಂತಾದ ವೈಶಿಷ್ಟ್ಯಗಳಿಂದ ಕೂಡಿರುವ ಈ ಚಿತ್ರವು ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಭರವಸೆ ಮೂಡಿಸುತ್ತದೆ.
ಹುನಗುಂದ ತಾಲೂಕಿನ ವೀರಾಪುರ ಹಾಗೂ ಇನ್ನಿತರ ಸ್ಥಳಗಳಲ್ಲಿ ಸತತ ಚಿತ್ರೀಕÀರಣವನ್ನು ನಡೆಸಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಲಾಗಿದೆ. ನೈಜ ಘಟನೆಯನ್ನು ಕಥೆಯಾಗಿ ಬರೆದ ಮಹಾಂತೇಶ ಹಳ್ಳೂರ ಕಥೆ, ಚಿತ್ರಕಥೆ ಸಂಭಾಷಣೆಯನ್ನು ಬರೆದಿದ್ದಾರೆ. ಛಾಯಾಗ್ರಹಣದ ಜೊತೆ ನಿರ್ದೇಶನದ ಹೊಣೆಯನ್ನು ಗುರುದತ್ತ ಮುಸುರಿ , ನಾಯಕ ನಟನ ಪಾತ್ರದೊಂದಿಗೆ ಚಿತ್ರ ನಿರ್ಮಾಣವನ್ನು ಮನ್ವೀತ್ ಎಸ್ ವಹಿಸಿಕೊಂಡಿದ್ದಾರೆ. ಸಹಾಯಕ ನಿರ್ದೇಶನ ಶೇಷಗಿರಿ ಸಂಕಲನ, ಡಿಸೈನ್ ಅನೀಲ , ಸಹ ನಿರ್ದೇಶನ ಬಸಲಿಂಗಪ್ಪ ತೋಟದ , ಮಾಧ್ಯಮ ಸಂಪರ್ಕ ಡಾ. ಪ್ರಭು ಗಂಜಿಹಾಳ ಡಾ.ವೀರೇಶ ಹಂಡಿಗಿ, ಪ್ರೊಡಕ್ಷನ್ ಮ್ಯಾನೇಜರ್ ಮಹಾಂತೇಶ ಮಠ ಆಗಿದ್ದಾರೆ.
ತಾರಾಗಣದಲ್ಲಿ ಮನ್ವೀತ್, ವಿಜಯಲಕ್ಷ್ಮಿ, ಮಹಾಂತೇಶ ಹಳ್ಳೂರ, ಬಸಲಿಂಗಪ್ಪ ತೋಟದ, ಜಯದೇವ ಗಂಜಿಹಾಳ, ಪ್ರವೀಣ ಭತ್ತದ, ಬಂಡು ಕಟ್ಟಿ, ಡಾ.ಚಂದ್ರನಾಥ ಒಂಟಕುದರಿ, ಮಂಜುಶ್ರೀ ಮಣಿ, ಹನಮಂತ ಮಸ್ಕಿ,ಮಹಾಂತೇಶ ಅಂಗಡಿ, ಮಹಾಂತೇಶ ಮಠ, ಮಹಾಂತೇಶ ಅಗಸಿಮುಂದಿನ, ಮಹಾಂತೇಶ ಅಂಗಡಿ, ನಾಗಪ್ಪ ಪೂಜಾರಿ, ಚಂದ್ರಶೇಖರ ಶಾಸ್ರ‍್ತಿ , ಸಂಗು ಮಠ, ಬಸನಗೌಡಾ ಹಿರೇಗೌಡ್ರ , ಮಹಾಂತೇಶ ಗಜೇಂದ್ರಗಡ, ವಿನೋದ ಹೂಗಾರ, ಢವಳಚಂದ ಪವಾರ, ಅನಂತ ಬಬಲೇಶ್ವರ, ಗುಡದೂರಕಲ್ಮಠ, ಗುರು ಮಠ, ಭೀಮರಾವ್ ಹಾಗೂ ವೀರಾಪುರ ಗ್ರಾಮದ ಸಮಸ್ತ ಜನತೆ ಅಭಿನಯಿಸಿದ್ದಾರೆ. ಆದಷ್ಟು ಬೇಗ ಚಿತ್ರದ ಸಂಪೂರ್ಣ ಕೆಲಸ ಮುಗಿಸಿ ತೆರೆಗೆ ತರುವ ಯೋಚನೆ ನಿರ್ಮಾಪಕರು,ಚಿತ್ರತಂಡದ್ದಾಗಿದೆ.

Mallikarjun

Share
Published by
Mallikarjun

Recent Posts

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…

44 minutes ago

ಹುಂಡಿಗೆ ಬಿತ್ತು ಭಕ್ತನ iPhone! ಅಯ್ಯೋ ಹುಂಡಿಗೆ ಬಿದ್ಮೇಲೆ ಮುಗೀತು

Devotee's iPhone fell into his pocket! Alas, it ended after falling into his pocket. ಹುಂಡಿಗೆ…

50 minutes ago

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

20 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

20 hours ago