ಕಲ್ಯಾಣಸಿರಿ ವಿಶೇಷ

ಶರಣರ ಆದರ್ಶ ಪಾಲನೆ ಜತೆಗೆ ಮಕ್ಕಳಿಗೆ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸಿ: ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ

Along with upholding the ideals of Sharan, make children aware of cultures: Sri Siddeshwara Shivacharya Swamiji

ಕೊಪ್ಪಳ,: ಶರಣರ ತತ್ವ ಅದರ್ಶಗಳನ್ನು ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕöÈತಿ ಮತ್ತು ಅಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಜಾಗೃತಿಗೊಳಿಸಿ ಎಂದು ಮೈನಳ್ಳಿ-ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಬುಧವಾರ ಸಂಜೆ ನಗರದ ಶ್ರೀ ರೇಣುಕಾಚಾರ್ಯ ಭವನದಲ್ಲಿ ಹುಣ್ಣಿಮೆಯ ಅರಿವು-ಆಚಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಉತ್ತಮ ಸಂಸ್ಕöÈತಿ ಮತ್ತು ಧರ್ಮವನ್ನು ಪಾಲನೆ ಮಾಡುವಂತೆ ಹೇಳಿ ಹೋಗಿದ್ದಾರೆ ಇಂಥಹ ಶರಣರ ಪರಂಪರೆಯನ್ನು ಹೊಂದಿರುವ ನಾವೆಲ್ಲರು ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕಾಗಿದೆ ಎಂದರು.

ಈ ಬಾರಿ ಹುಣ್ಣಿಮೆಯ ಅರಿವು-ಆಚಾರ ಕಾರ್ಯಕ್ರಮದಲ್ಲಿ ತೊಗಲು ಬೊಂಬೆ ಆಟ ಕಲಾವಿದರನ್ನು ಕರೆಸಿ, ಪರ್ದಶನ ಏರ್ಪಡಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯಮಾಡಿದ್ದಕ್ಕೆ ಖುಷಿಯ ವಿಚಾರವಾಗಿದೆ ಎಂದರು.

ಇದೇ ವೇಳೆ ಬೇವನಹಳ್ಳಿ ರಂಗ ಗಂಗೋತ್ರಿ ಕಲತಂಡ ಕಲಾವಿದರಾದ ಸುರೇಂದ್ರಸ್ವಾಮಿ ಅವರು ‘ಒಂದೇ ಭಾರತ ಕನಸು’ ಎಂಬ ತೊಗಲು ಬೊಂಬೆ ಆಟದ ಪ್ರಕಾರವನ್ನು ಪ್ರರ್ದಶಿಸಿದರು. ನಂತರ ಮಹೇಶ್ವರಸ್ವಾಮಿ ಶೇಖರಯ್ಯ ಮಳಿಮಠ ಅವರು ಪ್ರಸಾದ ವ್ಯವಸ್ಥೆ ಮಾಡಿದ್ದರು.

ಕಾರ್ಯಕ್ರಮದಲ್ಲಿ ಜಂಗಮ ಸಮಾಜ ಅಧ್ಯಕ್ಷರಾದ ಹಂಪಯ್ಯ ಮೆತಗಲ್ಲ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಸಯ್ಯ ಹಿರೇಮಠ, ಮುಖಂಡರಾದ ನೀಲಕಂಠಯ್ಯ ಹಿರೇಮಠ, ಶಿವಕುಮಾರ್ ಹಿರೇಮಠ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಪಂಪಯ್ಯ ಹಿರೇಮಠ, ನಾಗಭೂಷಣ ಸಾಲಿಮಠ, ಮರಿಶಾಂತವೀರ, ಲಲಿತಾ ಹಿರೇಮಠ, ಜಯಶ್ರೀ ಹಿರೇಮಠ, ಸವಿತಾ ಹಿರೇಮಠ, ಲಲಿತಾ ಸಾಲಿಮಠ ಸೇರಿದಂತೆ ಇನ್ನೂ ಅನೇಕ ಜಂಗಮ ಸಮಾಜದವರು ಇದ್ದರು.
ಕಾರ್ಯಕ್ರಮದ ಮೊದಲಿಗೆ ಶಿವಲೀಲಾ ಪ್ರಾರ್ಥನೆಗೈದರು, ಸಿದ್ದು ಹಿರೇಮಠ ಸ್ವಾಗತಿಸಿ, ಜಗದೀಶ್ ಹಿರೇಮಠ ನಿರೂಪಿಸಿ, ಕಾರ್ಯದರ್ಶಿ ಬಸಯ್ಯ ಹಿರೇಮಠ ವಂದಿಸಿದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

13 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

13 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

14 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

14 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

14 hours ago