Lightning operation by officials to smuggle illegal ration rice..
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ಆಹಾರ ಇಲಾಖೆ ಅಧಿಕಾರಿ ರವಿಚಂದ್ರ ಹಾಗೂ ಗ್ರಾಮೀಣ ಠಾಣಾ ಪೋಲೀಸರ ಭರ್ಜರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ವಾಹನ ಸಮೇತ ಪಡಿತರ ಅಕ್ಕಿ ವಶಕ್ಕೆ ಪಡೆದು ಕೇಸ್ ದಾಖಲಿಸಿದ ಘಟನೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾಹಿತಿ ಮೇರೆಗೆ ಕಿನ್ನಾಳ ಗ್ರಾಮದಿಂದ ಬುಡಷತ್ನಾಳ್ ಹೋಗುವ ಸಂದರ್ಭದಲ್ಲಿ ಯಮನೂರಪ್ಪ ಎಂಬ ವ್ಯಕ್ತಿ ಸಾಗಿಸುತ್ತಿದ್ದ ಎನ್ನಲಾದ ಅಕ್ರಮ ಪಡಿತರ ಅಕ್ಕಿ ಸಾಗಾಟನಡೆಯುತ್ತಿತ್ತು ಎಂದು ಖಚಿತ ಮಾಹಿತಿ ತಿಳಿದು ಅಧಿಕಾರಿ ದಾಳಿ ನಡೆಸಿ ಸುಮಾರು (7,ರಿಂದ 8) ಏಳರಿಂದ ಎಂಟು ಕ್ವೀಟಲ್ ಅಕ್ಕಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ, ಮಾಧ್ಯಮ ಜೊತೆಗೆ ಆಹಾರ ಇಲಾಖೆ ಅಧಿಕಾರಿ ರವಿಚಂದ್ರ ಅವರು ಮಾತನಾಡಿ ಮಾಹಿತಿ ತಿಳಿಸಿದ್ದಾರೆ.
ಬಡವರಿಗೆ ಸಿಗಬೇಕಾದ ಅಕ್ಕಿ ಕಳ್ಳರ ಪಾಲು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ಅಕ್ಕಿ ಬಡವರ ಹೊಟ್ಟೆ ತುಂಬಿಸುವ ಬದಲು ಧನಿಕರ ದಂಧೆಗೆ ಬಳಕೆಯಾಗುತ್ತಿದೆ. ಪಡಿತರ ಅಕ್ಕಿಗೆ ಕನ್ನ ಹಾಕುತ್ತಿರುವ ಕೆಲ ವರ್ತಕರು, ದಂಧೆಕೋರರು ಬಡವರ ಹೆಸರಿನಲ್ಲಿ ಅಕ್ಕಿ ತೆಗೆದುಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ಅಕ್ರಮ ಅಕ್ಕಿ ಸಾಗಣೆ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದು, ಎಫ್‌ಐಆರ್ ದಾಖಲು ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಅಕ್ರಮ ಪಡಿತರ ಅಕ್ಕಿಜಾಲ ಹೆಚ್ಚುತ್ತಲೇ ಇದೆ ಕಡಿಮೆ ಆಗುತ್ತಿಲ್ಲ ಎಂಬುದೇ ವಿಪರ್ಯಾಸ.
ರಾಜ್ಯದ ಬಿಪಿಎಲ್ ಕುಟುಂಬಗಳ ಪ್ರತಿ ಫಲಾನುಭವಿಗೆ ಸದ್ಯ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ, ಜಿಲ್ಲೆಯ ಎಲ್ಲ ತಾಲ್ಲೂಕು ಪ್ರದೇಶಗಳಲ್ಲಿ ಬಡವರ ಹೊಟ್ಟೆ ತುಂಬಿಸುವ ಪಡಿತರ ಅಕ್ಕಿ ಮಾರಾಟ ಲೀಲಾಜಾಲವಾಗಿ ನಡೆದರೂ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಹಳ್ಳಿಗರಿಗೆ ಆಸೆ ತೋರಿಸಿ ಕಡಿಮೆ ಬೆಲೆ ನಿಗದಿ ಮಾಡಿ ಸಣ್ಣ ದಲ್ಲಾಳಿಗರ ಮೂಲಕ ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದೆ.
ದಲ್ಲಾಳಿಗಳು ಪ್ರತಿ ಕೆ.ಜಿ ಅಕ್ಕಿಗೆ ₹12ರಿಂದ ₹15 ನೀಡಿ ಖರೀದಿಸಿ, ಮಾಹಿತಿ ಸೋರಿಕೆಯಾಗದಂತೆ ನಗರದ ಹೊರ ವಲಯದ ಗೊದಾಮು ಜಮೀನು ಪ್ರದೇಶದಲ್ಲೇ ಸಂಗ್ರಹಿಸಿ ಅಲ್ಲಿಂದ ರಾತ್ರಿ ಸಾಗಣೆ ಮಾಡುತ್ತಾರೆ ಎಂಬುದು ಈ ಹಿಂದೆ ಜಪ್ತಿ ಮಾಡಿದ ಹಲವು ಪ್ರಕರಣಗಳಿಂದ ತಿಳಿದು ಬಂದಿದೆ.
ಬಡವರಿಗೆ ಸಿಗಬೇಕಾದ ಅಕ್ಕಿ ಗಂಗಾವತಿ ಸ್ಥಳೀಯ ಅಕ್ಕಿಮಿಲ್‌ಗಳು ಪಾಲಿಸಿ ಮಾಡಿ ಸುಮಾರು ಒಂದು ಕೇ, ಜಿ ಅಕ್ಕಿಗೆ 50ರೂ,ಇಂದ 60ರೂಪಾಯಿಗೆ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೂಡಾ ಇದೆ ಹಾಗೂ ಜನರಿಗೆ ಉತ್ತಮ ಅಕ್ಕಿ ಎಂದು ನೀಡುವುದು ಒಂದೆಡೆಯಾದರೆ, ಸ್ಥಳೀಯ ಹೋಟೆಲ್‌ಗಳಿಗೂ ಸರಬರಾಜು ಮಾಡಲಾಗುತ್ತದೆ ಎಂಬ ಆರೋಪವೂ ಕೇಳಿ ಬಂದಿದೆ. ಒಟ್ಟಾರೆಯಾಗಿ ಪಡಿತರ ಅಕ್ಕಿ ನಿಜವಾದ ಬಡವರಿಗೆ ತಲುಪಬೇಕು ಎನ್ನುವದು ಸಾಮಾನ್ಯ ಜನರ ವಾದವಾಗಿದೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಇಂತಹ ಅಕ್ರಮ ತಡೆಯಬಹುದು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…