ಕಲ್ಯಾಣಸಿರಿ ವಿಶೇಷ

ಪಂಚಾಯತ್ ರಾಜ್ ಇಲಾಖೆಯಅಧಿಕಾರಿಗಳಿಂದ 15 ಲಕ್ಷವಸೂಲಿಗೆ ಆದೇಶಆರ್ಥಿಕನಿಯಮಗಳ ಉಲ್ಲಂಘನೆಯಡಿ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು

Order to recover Rs 15 lakh from Panchayat Raj Department officials Recommendation for disciplinary action as per rules for violation of financial rules

ಗಂಗಾವತಿ, ಮೇ.28: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ ಮತ್ತು ಮರಳಿ ಗ್ರಾ.ಪಂ.ನ 06 ಚೆಕ್ ಡ್ಯಾಂ ಕಾಮಗಾರಿಗಳ ಬಗ್ಗೆ ದಾಖಲೆಗಳ ಸಮೇತ ಎಸ್.ಹೆಚ್.ಮುಧೋಳ ಗಂಗಾವತಿ ಅವರು ದೂರನ್ನು ಸಲ್ಲಿಸಿದ್ದು, ದೂರುದಾರರು ದೂರಿದಂತೆ ಮನರೇಗಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾಮಾಗ್ರಿ ಸರಬರಾಜು ಮಾಡಿದ ವೆಂಡರ್‍ಗಳಿಂದ ಒಟ್ಟು 15 ಲಕ್ಷ ರೂ. ವಸೂಲು ಮಾಡಿ ಕೆ.ಟಿ.ಟಿ.ಪಿ ಆರ್ಥಿಕ ಮಾರ್ಗಸೂಚಿ

ಉಲ್ಲಂಘನೆಗಾಗಿ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಶಿಫಾರಸ್ಸು ಮಾಡಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಒಂಬುಡ್ಸ್‍ಪರ್ಸನ್ ವೀರಣ್ಣ ಕಳಕಪ್ಪ ಕಮತರ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ ಮತ್ತು ಮರಳಿ ಗ್ರಾ.ಪಂ.ನ ಎಲ್ಲಾ 06 ಚೆಕ್ ಡ್ಯಾಂ ಕಾಮಗಾರಿಗಳ ಅಂದಾಜು ಪತ್ರಿಕೆಯ ಮೊತ್ತ ರೂ.5.00 ಲಕ್ಷ ಮೀರಿದ್ದು ಕೆ.ಟಿ.ಪಿ.ಪಿ. ಕಾಯ್ದೆ ಉಲ್ಲಂಘನೆ ಮಾಡಿ ಕೊಟೇಷನ್ ಮೂಲಕ ಸಾಮಾಗ್ರಿ ಪೂರೈಕೆ ಮಾಡಿರುವುದು ನಿಯಮ ಬಾಹೀರ. ಅಂದಾಜು ಪತ್ರಿಕೆಯಲ್ಲಿ ನಿಗದಿಪಡಿಸಿದ ಮೊತ್ತದಲ್ಲಿ ಶೇ.90 ರಷ್ಟು ಕೂಲಿ ಮೊತ್ತ ಪಾವತಿಸಿದ ನಂತರ ಸಾಮಾಗ್ರಿ ಮೊತ್ತಕ್ಕೆ ಪೂರ್ಣ ಪ್ರಮಾಣದ ಎಫ್.ಟಿ.ಓ. ಸೃಜಿಸಬೇಕೆಂದು ಸ್ಪಷ್ಟವಾದ ನಿರ್ದೇಶನವಿದ್ದರೂ ಮಾರ್ಗಸೂಚಿ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೇ ಇಲ್ಲಿಯರೆಗೆ ಕೂಲಿಕಾರರ ಮೊತ್ತ ಬಟವಡೆಗೆ ಯಾವುದೇ ಬೇಡಿಕೆ ಕೂಡಾ ಕಡತಗಳಲ್ಲಿ ಲಭ್ಯವಿಲ್ಲದಿರುವುದು ಅನುಷ್ಠಾನ ವೈಪರಿತ್ಯದ ಕೈಗನ್ನಡಿಯಾಗಿದೆ. ಸದರಿ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿದ ಪ್ರಯುಕ್ತ, ಲೆಕ್ಕ ಪರಿಶೋಧನೆಯಾಗಿಲ್ಲ. ಕಡತದಲ್ಲಿ ಭುವನ್ ಜೀಯೋ ಟ್ಯಾಗ್ ಭಾವಚಿತ್ರಗಳು ಲಭ್ಯವಿಲ್ಲ. 03 ಕಾಮಗಾರಿಗಳಿಗೆ ಸಾಮಾಗ್ರಿ ಪೂರೈಸಿದ ಸರಬರಾಜುದಾರರಾದ ಓಂ ಸಾಯಿ ಹಾರ್ಡ್‍ವೇರ್ ಅವರು ದಿ:19.01.2022 ರಂದು ಜಿ.ಎಸ್.ಟಿ. ನೋಂದಣಿಯಾಗಿದ್ದು ದಿ:16.01.2021 ರಂದೇ ಬಿಲ್ಲನ್ನು ಕಛೇರಿಗೆ ಸಲ್ಲಿಸಿದ್ದು ಆರ್ಥಿಕ ನಿಯಮಗಳ ಉಲ್ಲಂಘನೆಯಾಗಿದೆ. ಸಾಮಾಗ್ರಿ ಪೂರೈಸಿದ ಮೂಲ ವೆಂಡರ್ ಬದಲಾವಣೆಗೆ ಮಾನ್ಯ ಆಯುಕ್ತರು ಗ್ರಾ.ಅ. ಬೆಂಗಳೂರು ಹಾಗೂ ಮಾನ್ಯ ಮು.ಕಾ.ನಿ.ಅ. ಜಿ.ಪಂ. ಕೊಪ್ಪಳರವರಿಂದ ನಿಯಮಾನುಸಾರ ಅನುಮೋದನೆ ಪಡೆದಿರುವುದಿಲ್ಲ. ಅಲ್ಲದೇ ರೂ.5.00 ಲಕ್ಷ ಮೀರಿದ ಮೊತ್ತಕ್ಕೆ ಕೆ.ಟಿ.ಪಿ.ಪಿ. ನಿಯಮಗಳನ್ವಯ ಟೆಂಡರ್ ಕರೆಯದೇ ಕೋಟೇಶನ್ ಮೇಲೆ ಸಾಮಾಗ್ರಿ ಖರೀದಿ ಕೈಗೊಂಡಿದ್ದು ನಿಯಮಬಾಹೀರ. ಆದ್ದರಿಂದ ಸದರಿ ಮೊತ್ತವನ್ನು ಸಿದ್ದಪ್ಪ ಕಿ.ಇಂ., ಎಸ್.ಡಿ.ನಾಗೋಡ್.(ನಿ) ಸ.ಕಾ.ನಿಅ.ಪಂ.ರಾ.ಇಂ.ಉಪ ವಿಭಾಗ ಗಂಗಾವತಿ,  ರವಿಪ್ರಸಾದ,(ನಿ), ಕಾ.ನಿ.ಇಂ.ಪಂ.ರಾ.ಇಂ. ವಿಭಾಗ ಕೊಪ್ಪಳರವರಿಂದ ತಲಾ ರೂ.2.98694 ಲಕ್ಷ ಮೊತ್ತವನ್ನು ಹಾಗೂ ಶಿವಕುಮಾರ ಪೂಜಾರ, ಸ.ಕಾ.ನಿ.ಇಂ.ಪಂ.ರಾ.ಇಂ. ಉಪ ವಿಭಾಗ ಗಂಗಾವತಿ ಮತ್ತು ರಂಗಯ್ಯ ಬಡಿಗೇರ, ಕಾ.ನಿ.ಇಂ.ಪಂ.ರಾ.ಇಂ.ವಿಭಾಗ ಕೊಪ್ಪಳ ಇವರಿಂದ ತಲಾ ರೂ. 1.49347 ಲಕ್ಷ ಅಧಿಕಾರಿಗಳಿಂದ ಹಾಗೂ ವೆಂಡರ್‍ರವರಿಂದ ವಸೂಲಾತಿಗೆ ಶಿಫಾರಸ್ಸು ಮಾಡುವುದಲ್ಲದೇ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿದೆ

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

18 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

18 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

19 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

19 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

19 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

19 hours ago