ಕಲ್ಯಾಣಸಿರಿ ವಿಶೇಷ

ಗ್ರಾಮೀಣ ಮಹಿಳೆಯರಿಗೆ ವಿಮೆ ಸೌಲಭ್ಯ ತಲುಪಿಸಿ-ರಾಮರೆಡ್ಡಿ ಪಾಟೀಲ್ ಸೂಚನೆ

Provide insurance facilities to rural women – Rama Reddy Patil instructs

ಗಂಗಾವತಿ : ಎಲ್ಲ ಸ್ವಸಹಾಯ ಸಂಘದ ಮಹಿಳಾ ಕಟುಂಬಗಳಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮೆಯನ್ನು ಒಕ್ಕೂಟದ ಸಿಬ್ಬಂದಿಗಳು ಮಾಡಿಸಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮರೆಡ್ಡಿ ಪಾಟೀಲ್ ಅವರು ಹೇಳಿದರು.

ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಎನ್ ಆರ್ ಎಲ್ ಎಮ್ – ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿಮಾತನಾಡಿದರು.

ಗ್ರಾಮೀಣ ಭಾಗದ ಎಲ್ಲ ಕುಟುಂಬಗಳಿಗೆ ಸರಕಾರದ ವಿಮೆ ಯೋಜನೆಗಳನ್ನು ತಲುಪಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಎನ್ ಆರ್ ಎಲ್ ಎಮ್ – ಸಂಜೀವಿನಿಯಡಿ ಗ್ರಾಪಂ ಮಹಿಳಾ ಒಕ್ಕೂಟದ ಕೆಲಸ ಮಾಡುವ ಎಂ.ಬಿ.ಕೆ., ಎಲ್ ಸಿಆರ್ ಪಿ, ಪಶು ಸಖಿ, ಕೃಷಿ ಸಖಿ ಅವರು ಒಂದು ಗ್ರಾಪಂ ವ್ಯಾಪ್ತಿಯಲ್ಲಿ 1000 ಮಹಿಳೆಯರಿಗೆ ವಿಮೆ ಯೋಜನೆ ಮಾಡಿಸಬೇಕು. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಎನ್ ಆರ್ ಎಲ್ ಎಮ್ – ಸಂಜೀವಿನಿ ಯೋಜನೆಯಡಿ ದೊರೆಯುವ ಸಾಲ-ಸೌಲಭ್ಯ, ಸಮುದಾಯ ಬಂಡವಾಳ ನಿಧಿ ಸೇರಿ ಇತರೆ ಸರಕಾರಿ ಯೋಜನೆಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸಬೇಕು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಸಹಾಯ ಸಂಘದ ಮಹಿಳಾ ವಾಹನ ಚಾಲಕರು, ಕಸ ವಿಲೇವಾರಿ ಮಾಡುವ ಮಹಿಳಾ ಸಿಬ್ಬಂದಿಗೆ ಸಕಾಲದಲ್ಲಿ ಗೌರವಧನ ಪಾವತಿಸಬೇಕು ಎಂದು ಸೂಚಿಸಿದರು.

ಘನತ್ಯಾಜ್ಯ ವಿಲೇವಾರಿ ಘಟಕ, ಬಳಕೆದಾರರ ಕರವಸೂಲಿ, ಎನ್ ಆರ್ ಎಲ್ ಎಮ್ ಶೆಡ್ ನಿರ್ಮಾಣ, ಪ್ರಧಾನಮಂತ್ರಿ ವನಧನ ವಿಕಾಸ ಯೋಜನೆ, ಪಂಚಾಯತ್ ರಾಜ್ ಸಂಸ್ಥೆ ಸಮುದಾಯ ಆಧಾರಿತ ಒಗ್ಗೂಡಿಸುವ ಯೋಜನೆ, ಬ್ಯಾಂಕ್ ಲಿಂಕೇಜ್, ನಲ್ ಜಲ್ ಮಿತ್ರ, ಮಾಸಿಕ ಸಂತೆ, ಕೆ.ಎಂ.ಎಫ್ ಮಹಿಳಾ ಸಂಘಗಳು, ನಮೋ ಡ್ರೋನ್ ದೀದಿ ಯೋಜನೆ, ಈ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಗತಿ ಮಾಹಿತಿ ಪಡೆದರು.

ಸಂಜೀವಿನಿ ಯೋಜನೆ ಜಿಲ್ಲಾ ವ್ಯವಸ್ಥಾಪಕರಾದ ಯಂಕೋಬ ಅವರು ಮಾತನಾಡಿ, ಲಿಂಗತ್ವ ಸಮಾನತೆ ಹಾಗೂ ಮಹಿಳಾ ಸಂಘಗಳ ಹೊಸ ರಚನೆ, ಪಂಚಾಯತ್ ರಾಜ್ ಸಂಸ್ಥೆಗಳ ಸಮುದಾಯ ಆಧಾರಿತ ಯೋಜನೆ ಕುರಿತು ಮಾಹಿತಿ ನೀಡಿದರು.

ಎಸ್ ಬಿ ಐ ಬ್ಯಾಂಕ್ ಆರ್ಥಿಕ ಸಾಕ್ಷಾರತಾ ಸಲಹೆಗಾರರಾದ ಆಂಜನೇಯ ಅವರು ಮಾತನಾಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ವಿಮೆ ಕುರಿತು ಮಾಹಿತಿ ನೀಡಿದರು.

ಎನ್ ಆರ್ ಎಲ್ ಎಮ್ – ಸಂಜೀವಿನಿ ಪ್ರಭಾರ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ, ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ, ತಾಲೂಕು ಸಂಯೋಜಕರಾದ ಜ್ಯೋತಿ, ಡಿಇಓ ಮಂಜುನಾಥ ಜೋಗದ, ಸಿಬ್ಬಂದಿಗಳಾದ ಕೀರ್ತಿ, ದುರುಗಮ್ಮ, ಎಲ್ಲ ಗ್ರಾಪಂ ಎಂ.ಬಿ.ಕೆ., ಎಲ್ ಸಿಆರ್ ಪಿ, ಪಶು ಸಖಿ, ಕೃಷಿ ಸಖಿ ಹಾಗೂ ಒಕ್ಕೂಟದ ಅಧ್ಯಕ್ಷರು ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

17 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

17 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

17 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

17 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

17 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

17 hours ago