ಕಲ್ಯಾಣಸಿರಿ ವಿಶೇಷ

೫೦೧ ವಚನಕಂಠಪಾಠ ಸ್ಪರ್ಧೆಯಲ್ಲಿ ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರಿಗೆ ಪ್ರಥಮಸ್ಥಾನರೂ,೨೫ಸಾವಿರ ಬಹುಮಾನ

501 First place and Rs. 25,000 prize for Sachidananda Prabhu Chatnalli in the verse memorization competition

ಬೆಂಗಳೂರು :ನಗರದ ಬಸವ ನಗರದ ಬಸವ ಸೇವಾ ಸಮಿತಿ ಇವರು ಜಗಜ್ಯೋತಿ ಗುರು ಬಸವಣ್ಣನವರ ೮೯೨ನೆ ಜಯಂತಿಯ ಅಂಗವಾಗಿ ಹಮ್ಮಿಕೊಂಡಿರುವ ವಚನಕಂಠಪಾಠ ಸ್ಪರ್ಧೆಯಲ್ಲಿ ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರು ಭಾಗವಹಿಸಿ ೫೦೧ ವಚನಗಳನ್ನು ಹೇಳಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಬೆಳಿಗ್ಗೆ ೮ ಘಂಟೆಗೆ ಕೆ.ಆರ್.ಪುರ ದ ಶಾಸಕರಾದ ಶ್ರೀ ಬೈರತಿ ಬಸವರಾಜರವರು ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ವಚನ ಕಂಠಪಾಠವನ್ನು ಉದ್ಘಾಟನೆ ಮಾಡಿದರು.

ಬೆಳಿಗ್ಗೆ ೮:೦೦ ಗಂಟೆಯಿಂದ ೪:೦೦ ಗಂಟೆಯವರೆಗೆ ನಡೆದ ಕಾರ್ಯಕ್ರದಲ್ಲಿ ೫ಗಂಟೆ ೧೦ ನಿಮಿಷಗಳ ಕಾಲ ಸತತವಾಗಿ ವಚನಗಳನ್ನು ಕಂಠಪಾಠವಾಗಿ ಹೇಳಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಸಂಜೆ ನಡೆದ ಕಾರ್ಯಕ್ರಮದಲ್ಲಿ ೨೫೦೦೦/- ರೂಪಾಯಿ ಬಹುಮಾನ ನೀಡಿ ಗೌರವಿಸಿದರು

ಗುರುಬಸವಣ್ಣನವರು, ಜಗನ್ಮಾತೆ ಅಕ್ಕಮಹಾದೇವಿಯವರ, ಮತ್ತು ಗುರು ಸಿದ್ಧರಾಮೇಶರರ ಸ್ತೋತ್ರ ತ್ರಿವಿಧಿಯಿಂದ ವಚನಗಳನ್ನು ಆಯ್ಕೆ ಮಾಡಿಕೊಂಡಿದ್ದರು.
ಬಸವ ಸೇವಾ ಸಮಿತಿ ಪರವಾಗಿ ಶರಣರತ್ನ ಸಚ್ಚಿದಾನಂದ ಚಟ್ಳಿಯವರಿಗೆ ಶರಣ ಮಲ್ಲಿಕಾರ್ಜುನ ಹಂಜಿ ಅಧ್ಯಕ್ಷರು ಬಸವ ಸೇವಾ ಸಮಿತಿ ಅಭಿನಂದನೆ ತಿಳಿಸಿದ್ದಾರೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

14 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

14 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

14 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

14 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

15 hours ago