MLA M R Manjunath has instructed officials to ensure that there are no lapses in the cabinet meeting.
ವರದಿ : ಬಂಗಾರಪ್ಪ .ಸಿ .
ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ತಿಂಗಳು ಏಪ್ರಿಲ್ 24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಸ್ಥಳವನ್ನು ತಜ್ಞರ ಅಭಿಪ್ರಾಯ ಮೇರೆಗೆ ದೀಪದ ಗಿರಿ ವಡ್ಡುವಿನ 108 ಅಡಿ ಪ್ರತಿಮೆ ಆವರಣದ ಬದಲಾಗಿ ನೂತನ 376 ವಸತಿಗೃಹದ ಮುಂಭಾಗದ ಖಾಲಿ ನಿವೇಶನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ. ಆರ್ ಮಂಜುನಾಥ್ ಮಾಹಿತಿಯನ್ನು ನೀಡಿದರು.
ನಂತರ ಮಾದ್ಯಮದವರ ಜೋತೆಯಲ್ಲಿ ಮಾತನಾಡಿದ ಅವರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಆವರಣದ ದೀಪದಗಿರಿ ಒಡ್ಡಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ತಜ್ಞರ ಅಭಿಪ್ರಾಯ ಮೇರೆಗೆ ಸ್ಥಳ ಬದಲಾಯಿಸಲಾಗಿದೆ.
ದೀಪದ ಗಿರಿ ಒಡ್ಡು ತುಂಬಾ ಎತ್ತರ ಇರುವುದರಿಂದ ಆ ಸ್ಥಳದಲ್ಲಿ ವಿಪರೀತ ಗಾಳಿ ಬೀಸುವ ಕಾರಣದಿಂದ ಸಭೆ ನಡೆಸಲು ತೊಡಕುಂಟಾಗಬಹುದೆಂದು ಜೊತೆಗೆ ಮಳೆ ಸಂಧರ್ಭದಲ್ಲಿ ಈ ಸ್ಥಳವು ಸೂಕ್ತವಲ್ಲ ಅದಲ್ಲದೆ ಇಲ್ಲಿ ಕಲ್ಲು ಮಣ್ಣು ಮಿಶ್ರಿತವಾಗಿರುವುದರಿಂದ ಸಭೆ ಮಾಡಲು ಹಾಕಲಾಗುವ ಶಾಮಿಯಾನಗಳು ಬಿಗಿ ಇರುವುದಿಲ್ಲ ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ನೂತನ 376 ಕೊಠ್ಠಡಿಯ ಮುಂಬಾಗ ಸಭೆಗೆ ಬರುವ ವಾಹನಗಳನ್ನು ನಿಲ್ಲಿಸಲು ಆಯೋಜಿಸಲಾಗಿತ್ತು, ಇಂದು ಸಭೆಯನ್ನು ಇಲ್ಲಿ ಆಯೋಜನೆ ಮಾಡಲಾಗಿದ್ದು, ವಾಹನಗಳ ನಿಲುಗಡೆಯನ್ನು ನೂತನ ವಸತಿ ಗೃಹದ ಹತ್ತಿರ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ್, ಅಪಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್,ಡಿ.ವೈ ಎಸ್. ಪಿ ಧರ್ಮೇಂದ್ರ,ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನನ್,ಮಹದೇವಸ್ವಾಮಿ, ಮುಖಂಡರುಗಳಾದ ರಾಜುಗೌಡ,ವಿಜಯ್ ಕುಮಾರ್ , ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಉಪಸ್ಥಿತರಿದ್ದರು…
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…