ಕಲ್ಯಾಣಸಿರಿ ವಿಶೇಷ

ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಭಾಂದವರು ಸಡಗರ ಸಂಭ್ರಮಗಳೊಂದಿಗೆ ಆಚರಿಸಿದರು.

The holy festival of Ramadan was celebrated with great enthusiasm by the Muslim community.

ಕೊಟ್ಟೂರು ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದ ಮುಸ್ಲಿಂ ಭಾಂದವರು ಸೋಮವಾರ ಸಡಗರ ಸಂಭ್ರಮಗಳೊಂದಿಗೆ ಆಚರಿಸಿದರು, ಇಲ್ಲಿನ ಪ್ರಮುಖ ಮಸೀದಿಗಳಲ್ಲಿ ಹಬ್ಬದ ನಿಮಿತ್ತವಾಗಿ ಮುಸ್ಲಿಂ ಆರಾಧ್ಯ ದೈವ ಅಲ್ಲಾಹುವಿನ ನಾಮಸ್ಮರಣೆ ಬೆಳೆಗ್ಗೆ ೯ ರಿಂದಲೇ ಮಾರ್ದನಿಸಿದವು.

ಪಟ್ಟಣದ ಬಿಲಾಲ್, ಉಸ್ಮಾನಿಯ, ಜಾಮೀಯ, ಮುಬಾರಕ್, ಇಲಾಹಿ,ತೌಹಿದ್ ಮಸೀದಿಗಳಿಂದ ಮುಸ್ಲಿಂ ಜನಾಂಗದವರು ನೂರಾರು ಸಂಖ್ಯೆಯಲ್ಲಿ ಜಮಾವಣೆ ಗೊಂಡು ಪಾದಯಾತ್ರೆಯ ಮೆರವಣಿಗೆ ಕೈಗೊಂಡರು. ನಂತರ ಇಲ್ಲಿನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿನ ಖಬರ್‌ಸ್ಥಾನದಲ್ಲಿ ಕೂಡಿಕೊಂಡು ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ಧರ್ಮಗುರುಗಳಾದ ಖಾರಿ ಹಾಫೀಜ್ ಇಮ್ರಾನ್ ರವರು ನೆರೆದಿದ್ದ ಭಾಂದವರಿಗೆ ಧರ್ಮೊಪದೇಶ ನೀಡಿ ಪ್ರಾರ್ಥನೆಯನ್ನು ಭೋದಿಸಿದರು. ಇವರ ಅಜ್ಞಾನುಸಾರ ಜನಾಂಗದ ಭಾಂದವರು ರಾಗಬದ್ದವಾಗಿ ಅಲ್ಲಾಹುನನ್ನು ಸ್ಮರಿಸಿ ನಮಸ್ಕರಿಸಿದರು. ನಂತರ ಪರಸ್ಪರ ಒಬ್ಬರನ್ನು ಒಬ್ಬರು ಆಲಂಗಿಸಿಕೊಂಡು ಈದ್-ಮುಬರಕ್ ಹೇಳಿಕೊಂಡರು.

ಈ ಸುಸಂಧರ್ಭದಲ್ಲಿ ಹಾಫೀಜ್ ಜಬಿ ಉಲ್ಲಾ, ಹಾಫೀಜ್ ಸಾಜೀದ್, ಮುಫ್ತಿ ಯಾಸೀನ್, ಹಾಫೀಜ್ ಚಾಂದ್ ಭಾಷಾ, ಅಯೂಬ್ ಖಾನ್, ನೂರುಲ್ಲಾ ಖಾನ್, ನಜೀರ್ ಸಾಬ್, ಬಾಷಾ ಸಾಬ್ ಇನ್ನು ಮಸೀದಿಯ ಪ್ರಮುಖ ಮುಖಂಡರು ಸೇರಿದ್ದರು
ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಸ್ವಾಗತ ಕೋರಿ ಧನ್ಯವಾದಗಳು ತಿಳಿಸಿದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

14 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

14 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

14 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

14 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

14 hours ago