ಕಲ್ಯಾಣಸಿರಿ ವಿಶೇಷ

ಗಿಣಿಗೇರಿ ಗ್ರಾಮದಲ್ಲಿ  ಮರಕಡಿಯುವುದನ್ನು ನಿಲ್ಲಿಸಿ.ಗಿಣಿಗೇರಿ ನಾಗರಿಕ ಹೋರಾಟ ಸಮಿತಿ.

Stop cutting down trees in Ginigeri village. Ginigeri Civil Struggle Committee.


ಕೊಪ್ಪಳ ತಾಲೂಕಿನ ಗಿಣಿಗೇರಿ ಗ್ರಾಮದ ಸುತ್ತಲೂ ಕೈಗಾರಿಕೆಗಳ ದೂಳು ಹೋಗೆಯಿಂದ, ಈಗಾಗಲೇ ಪರಿಸರ ಹಾಳಾಗಿ  ಜನಸಾಮಾನ್ಯರ ಆರೋಗ್ಯ ಉಸಿರಾಟದ ತೊಂದರೆಗಳು, ಕ್ಯಾನ್ಸರ್ ಟಿಬಿ, ಅಸ್ತಮಾ, ಮುಂತಾದ  ಅನಾರೋಗ್ಯ ತೊಂದರೆಗಳು ಜನರನ್ನು  ಆತಂಕಗೊಳಿಸಿದೆ.
ಇಂಥ ಸಂದರ್ಭದಲ್ಲಿ  ಗಿಣಿಗೇರಿ ಗ್ರಾಮದಲ್ಲಿ  ಹೆಚ್ಚು ಮರಗಳನ್ನು ಸಸಿಗಳನ್ನು ನೆಟ್ಟು  ಧೂಳು ಬರದಂತೆ ಮತ್ತು ಪರಿಸರ ರಕ್ಷಣೆ ಮಾಡಬೇಕಾಗಿತ್ತು.
ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇರುವ  ಬೇವಿನ ದೊಡ್ಡ ಮೊರವನ್ನು ಕಡಿದು  ನೆಲಕ್ಕುರುಳಿಸುವಂತೆ ಕೆಲಸವನ್ನು ಮಾಡುತ್ತಿರುವುದನ್ನು ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡ ಮಂಗಳೇಶ್ ರಾಥೋಡ್ ಖಂಡಿಸಿ ಗಿಡ ಕಡಿಯುವುದನ್ನು ನಿಲ್ಲಿಸಿದ್ದಾರೆ.
ಈಗಾಗಲೇ ಹಲವಾರು ಬಾರಿ ಪರಿಸರ ಉಳಿವಿಗಾಗಿ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತು ಕೊಪ್ಪಳ ಜಿಲ್ಲೆ  ಉತ್ತರ ಕರ್ನಾಟಕದ ಭಾಗದ ಎಲ್ಲ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ಲೆಕ್ಕಾಚಾರದಲ್ಲಿ ಹಿಂದೂ ಉಳಿದಿದೆ.
ಗ್ರಾಮ ಪಂಚಾಯತಿ ಗಿಡ ನೆಡುವುದನ್ನು ಬಿಟ್ಟು ಗಿಡ ಕಡಿಯುವಂತ ಕೆಲಸವನ್ನು ಮಾಡುತ್ತಿರುವುದು ಯಾರ ಹಿತಾಸಕ್ತಿ ಗೋಸ್ಕರ.
ಹಲವಾರು ಬಾರಿ ಗ್ರಾಮ ಪಂಚಾಯತಿಗೆ ತಾಲೂಕ ಪಂಚಾಯತಿಗೆ ಮತ್ತು ಪರಿಸರ ಮಾಲಿನ್ಯ ಅಧಿಕಾರಿಗಳಿಗೆ ಹಾಗೂ ಅರಣ್ಯ ಅಧಿಕಾರಿಗಳಿಗೆ ಮುಖ್ಯ ರಸ್ತೆ ಪಕ್ಕದಲ್ಲಿ ಗಿಡ ನೀಡಬೇಕೆನ್ನುವ ವಿಚಾರದ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರು ಗಿಡ ನೆಟ್ಟಿಲ್ಲ.. ಹಾಗಾಗಿ ಮುಂದಿನ ದಿನಗಳಲ್ಲಿ ಗಿಡ ಕಡಿಯುವ ಬದಲು ಗಿಡಗಳನ್ನು ನೆಡಿಸಿ ಜನರ ಜಾನುವಾರುಗಳ ಪರಿಸರ ಗಿಣಿಗೇರಿ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿಸಲು ಕ್ರಮ ಕೈಗೊಳ್ಳಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಆಗ್ರಹಿಸುತ್ತದೆ.
ಸುದ್ದಿಗಾಗಿ ಶರಣು ಗಡ್ಡಿ ಸಂಚಾಲಕರು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

11 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

11 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

11 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

11 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

11 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

12 hours ago