ಕಲ್ಯಾಣಸಿರಿ ವಿಶೇಷ

ಸಂಧ್ಯಾ ಹೇರೂರಗೆ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ.

Best Woman Entrepreneur Award for Sandhya Heroor.

ಗಂಗಾವತಿ: ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಕಲಬುರ್ಗಿ ಈ ಸಂಸ್ಥೆಯಿಂದ ಕೊಡ ಮಾಡುವ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ, ಇಲ್ಲಿನ ನಗರದ ಸಗಟು ಔಷಧ ಮಾರಾಟಗಾರರಾದ ಶ್ರೀಮತಿ ಸಂಧ್ಯಾ ಪಾರ್ವತಿ ಹೇರೂರ ಅವರಿಗೆ ಲಭಿಸಿದೆ.ಇವರೊಂದಿಗೆ ಶ್ರೀಮತಿ ನಮ್ರತಾ ಪಟಾಟೆ, ಶೀತಲ ಗಿಲ್ಡಾ, ಕುಮಾರಿ ನಂದಿನಿ ರಘೊಜಿ ಇವರುಗಳಿಗೂ ಗಣರಾಜ್ಯೊತ್ಸವ ದಿನವಾದ ಜನವರಿ-29 ರಂದು ಈ ಕಲಬುರ್ಗಿಯ ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜಿನ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

2021 ರಲ್ಲಿ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಮಂಡಳಿ ಬೆಂಗಳೂರು ಈ ಸಂಸ್ಥೆ ನೀಡುವ ಮಹಿಳಾ ಶ್ರೇಷ್ಠ ವ್ಯಾಪಾರಿ ಪ್ರಶಸ್ತಿಯನ್ನು ಮತ್ತು ಗಂಗಾವತಿಯ ಮಹಿಳಾ ಸಂಘದಿಂದ ನೀಡಲಾದ ಉತ್ತಮ ಮಹಿಳಾ ಪ್ರಶಸ್ತಿಯನ್ನು ಶ್ರೀಮತಿ ಸಂಧ್ಯಾ ತಮ್ಮದಾಗಿಸಿಕೊಂಡಿದ್ದರು.ಪ್ರಸ್ತುತ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಘಟಕದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸಂಧರ್ಭದಲ್ಲಿ ಸಣ್ಣ ಕೈಗಾರಿಕಾ ಖಾತೆಯ ಸಚಿವ ಶರಣಪ್ಪ ದರ್ಶನಾಪೂರ,ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಸಿ,ಮಾಜಿ ಸದಸ್ಯ ಅಮರನಾಥ ಪಾಟೀಲ್, ಕಲ್ಯಾಣ ಕರ್ನಾಟಕ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್, ಮಾಜಿ ಅಧ್ಯಕ್ಷ ಪ್ರಶಾಂತ ಎಸ್.ಮಾನಕರ್,ಉಪಾಧ್ಯಕ್ಷ ಚನ್ನ ಮಲ್ಲಿಕಾರ್ಜುನ ಅಕ್ಕಿ ಯಾದಗಿರಿ, ಕಾರ್ಯದರ್ಶಿ ಮಂಜುನಾಥ ಜೆವರ್ಗಿ, ಮಾಜಿ ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಮತ್ತು ಸಂಸ್ಥೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ
ಶ್ರೀಮತಿ ಸಂಧ್ಯಾ ಅವರ ಪತಿ ಅಶೋಕಸ್ವಾಮಿ ಹೇರೂರ, ಮಕ್ಕಳಾದ ಡಾ.ಅಭಿಷೇಕಸ್ವಾಮಿ, ಡಾ.ಅಭಿಲಾಷಾ ಹಾಜರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

13 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

13 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

13 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

13 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

14 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

14 hours ago