ಕಲ್ಯಾಣಸಿರಿ ವಿಶೇಷ

ಬಡ ಮಕ್ಕಳ ಶಿಕ್ಷಣ ಹಾಗೂ ಸಮಾಜ ಮುಖಿ ಕಾರ್ಯಕ್ಕೆ ಚುಂಚನಗಿರಿ ಮಠ ಸದಾ ಸಿದ್ದ :ಶ್ರೀ ಶ್ರೀ ಡಾ,ನಿರ್ಮಲನಂದನಾಥ ಸ್ವಾಮೀಜಿಗಳು ,

Chunchanagiri Math is always ready for the education of poor children and social work: Sri Sri Dr Nirmal Nandanath Swamiji.

ವರದಿ : ಬಂಗಾರಪ್ಪ .ಸಿ .
ಮಂಡ್ಯ :ನಮ್ಮ ಗುರುಗಳಾದ ಪದ್ಮಭೂಷಣ ಶ್ರೀ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳ ಆರ್ಶಿವಾದದಿಂದ ಇಂದು ಶ್ರೀ ಸಾರ್ವಜನಿಕ ಮಠವಾಗಿ ಎತ್ತರಕ್ಕೆ ಬೆಳೆದಿದ್ದು ಪ್ರತಿಯೋಬ್ಬರು ಮಠದ ಕಾರ್ಯವನ್ನು ಸದುಪಯೋಗ ಪಡಿಸಿಕೊಂಡು ಶ್ರೀ ಮಠದ ಜೋತೆಯಲ್ಲಿ ನಿರಂತರವಾಗಿ ಸಂಪರ್ಕ ಸಾದಿಸಬೇಕಾಗಿದೆ ಎಂದು ತಿಳಿಸಿದರು.
ಶ್ರೀ ಆದಿಚುಂನಗಿರಿ ಮಹಾಸಂಸ್ಥಾನ ಮಠದ ಶ್ರೀ ಗಿರಿ ತಪೋವನದಲ್ಲಿ ಅಯೋಜಿಸಿದ
ರಾಜ್ಯಮಟ್ಟದ ಹದಿನೇಳನೆ ಅರ್ಚಕರ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ೨೦೨೪-೨೦೨೫ ರ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ
ಶ್ರೀ ನಿರ್ಮಲನಂದನಾಥ ಸ್ವಾಮೀಜಿಗಳು ಪುರದ ಹಿತವನ್ನು ಕಾಪಾಡುವವರೆ ನಿಜವಾದ ಪುರೋಹಿತರು , ನಿಮ್ಮ ಮನಸಿನ‌ ಬಾವನೆ ಸ್ಪಂದಿಸಿ , ನಿವು ಬೇಡವಾದ ಚಿಂತನೆಗಳನ್ನು ಕಡಿಮೆ ಮಾಡಬೇಕು , ಪ್ರತಿಯೋಬ್ಬ ಮನುಷ್ಯನ ತಲೆಯಲ್ಲಿ ಗಾಮ ನಂತರ ಬೀಟಾ ,ಆಲ್ಪ ,ತಿಟಾ ನಂತರ ಡೆಲ್ಟಾ ಎಂಬ ವೇವ್ಸ್ ಗಳಿದ್ದು ಪ್ರತಿ ಸೆಕೆಂಡಿಗೂ ಅದರ ಸ್ವಭಾವವನ್ನು ತೋರುತ್ತಿರುತ್ತವೆ ,ಮುಂದಿನ ದಿನಗಳಲ್ಲಿ ಹಲವಾರು ಜನರು ಮಾನಸಿಕ ಅಸ್ವಸ್ಥತೆಯಿಂದ ಕೂಡಿರುತ್ತಾರರ ,,ಕಳೆದ ಮೂರ್ನಾಲ್ಕು ದಶಕಗಳಿಂದ ನಮ್ಮ ದೇಶದಲ್ಲಿ ದೇವಾಲಯ ಕಟ್ಟಿಸಿದ್ದಾರೆ ,ಮಕ್ಕಳು ಓದುವ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಓದುತ್ತಿಲ್ಲ
ನಿರುದ್ಯೋಗ ಹೆಚ್ಚುತ್ತದೆ , ಪುರೋಹಿತರು ಸರಿಯಾದ ಮಂತ್ರ ಉಚ್ಚಾರಣೆ ಮಾಡದಿದ್ದರೆ ದೆವರು ಬರಬೇಕಾದ ಸ್ಥಳದಲ್ಲಿ ವ್ಯತ್ಯಸವಾದರೆ ದೇವ್ವಗಳು ಬರುತ್ತವೆ, ಈ ಹಿಂದೆ ಪಾಡ್ಯರಾಜರು ಶಂಕರಾಚಾರ್ಯರ ಮುಖಾಂತರ ದೇವಿ ದೇವತೆಯ ವೇದ ಬೀಜಾಕ್ಷರುಗಳನ್ನು ಬೇದಿಸಿ ತಕ್ಷಣವೆ ಪುರದ ಅನಾವುತವನ್ನು ತಡೆಯದರು ,
ವಿಜ್ಞಾನ ಹಲವು ಪ್ರಬೇದದ ಬೇದವುಂಟಾದರೆ, ವೇದದಲ್ಲಿ ಒಗ್ಗಟ್ಟು ಮೂಡಿಸುತ್ತದೆ ,ಪೂಜೆ ನಡೆಯುವ ಸ್ಥಳದಲ್ಲಿ ಎಚ್ಚರ ದಿಂದಿರಬೇಕು ಹಿರಿಯಯ ದೇವಾಲಯಗಳಿಗೆ ಗೌರವನನ್ನು ನೀಡಿತ್ತಿದ್ದರು , ಪ್ರತಿಯೋಬ್ಬರು ‌ಊರಿಗೆ ಹೋದ ನಂತರ ನಿಮ್ಮ ಊರಿನಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಮ್ಮ ಸಂಸ್ಥೆಗಳು ,ನಾವು ಸದಾ ಸಿದರಿದ್ದೇವೆ ,ಅಂಗವಿಕಲ ಮಕ್ಕಳು ,ಬಡ ಮಕ್ಕಳನ್ನು ನಮ್ಮಲ್ಲಿಗೆ ಕರೆತರಬೇಕು ,ನಿಮ್ಮ ಊರಿನಲ್ಲಿ ಹಲವಾರು ಜನರಿಗೆ ಆರೋಗ್ಯ ಕೆಟ್ಟರೆ ನಮ್ಮ ಆಸ್ಪತ್ರೆಯಲ್ಲಿಗೆ ಉಪಯೋಗಿಸಿಕೊಳ್ಳಿ ನಾವು ಸೇವೆ ಮಾಡಲು, ಸದಾ ಸಿದ್ದರಿದ್ದೆವಿ ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಎಮ್ ವಿ ವೆಂಕಟೇಶ ರವರು ಸಾವಿರಾರು ವರ್ಷಗಳ ಇತಿಹಾಸವಿರುವ ಸನಾತನಾ ಧರ್ಮವು ಉನ್ನತ ಮೌಲ್ಯವನ್ನು ಕಟ್ಟಿದೆ, ಭಕ್ತರಿಗೂ ಭಗವಂತನಿಗೂ ಉತ್ತಮ ಸಂಬಂದವಿದೆ ದೇವರಿಗೂ ಮತ್ತು ಭಕ್ತರಿಗೆ ಮದ್ಯ ಕೊಂಡಿಯಾಗಿ ಅರ್ಚಕರು ಕಾರ್ಯನಿರ್ವಹಿಸಿಬೇಕು , ವೇದಾಗಾಮಗಳನ್ನು ಮೂಲವಾಗಿಟ್ಟುಕೊಂಡು ಕಾರ್ಯನಿರ್ವಹಿಸಿದ್ದರೆ ನಮ್ಮ ಜನ್ಮ ಪಾವನವಾಗುತ್ತದೆ,ಧಾರ್ಮಿಕ ಸೇವೆಯ ಜೊತೆಯಲ್ಲಿ ವಿದ್ಯಾದಾನ ಮಾಡುತ್ತಿರುವ ಮಠಕ್ಕೆ ನಾನು ಸದಾ ಅಬಾರಿಯಾಗಿದ್ದೆನೆ , ರಾಜ್ಯದಲ್ಲಿ ಹಲವಾರು ದೇವಾಲಯಗಳಿಗೆ ಬೇಟಿ ನೀಡಿದ್ದೆನೆ ದೇವರಿಗೆ ಭಕ್ತಿಯಿಂದ ಪೂಜಿಸಿದರೆ ಅವರಿಗೆ ನೆಮ್ಮದಿಯನ್ನು ನೀಡುತ್ತವೆ , ಅರ್ಚಕರು ಶುದ್ದ ಹಸ್ತ ರಾಗಿ , ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ತಾವು ಉಚ್ಚಾರಣೆ ಮಾಡುವ ಮಂತ್ರವು ಬಹಳ ಸ್ಪಷ್ಟವಾಗಿದ್ದರೆ ಬಹಳ ಒಳ್ಳೆಯದು ,ದೇವರು ಯಾವಾಗಲೂ ಮಂತ್ರಗಳಿಗೆ ಅದೀನವಾಗುತ್ತಾರೆ ,ನಾವು ದೇವಾಲಯಕ್ಕೆ ಬೇಟಿ ನೀಡಿದರೆ ನೆಮ್ಮದಿ ಸಿಗುವಂತಾಗಬೇಕು , ಮಾನಸಿಕ ಸ್ವಾಸ್ತ್ಯವನ್ನು ಕಾಪಾಡವಂತಿರಬೇಕು, ಇತ್ತಿಚಿನ ಒತ್ತಡದ ಬದುಕಿನಲ್ಲಿ ದೇವಾಲಯಗಳು ಒಂದು ದಿನ ಬಾಗಿಲು ಹಾಕಿದ್ದರೆ ಎಲ್ಲಾರು ಮಾನಸಿಕವಾಗಬೇಕಾಗುತ್ತದೆ ,, 108500 ಖಾಸಗಿ ದೇವಾಲಯ ಗಳಿವೆ ಮೂವತೈದು ಸಾವಿರ ಸರ್ಕಾರಿ ದೇವಾಲಯಗಳಿವೆ
ಎಂದು ಮಾಹಿತಿ ನೀಡಿದರು . ಸಂಸ್ಕೃತ ಶಾಲಾ ಕಾಲೇಜಿನ‌ಪ್ರಾಂಶುಪಾಲರಾದ‌ ಶ್ರೀ ಕಾಂತ್
ಪುರೋಹಿತ್ ರವರ ಮಾತನಾಡಿ ಅರ್ಚಕ ಶಿಬಿರದಲ್ಲಿ ರಾಜ್ಯದ ಇಪ್ಪತ್ತೇಂಟು ಜಿಲ್ಲೆಯಿಂದ ಹಾಗೂ,ಹೊರ ರಾಜ್ಯದ ಎರಡು ಜಿಲ್ಲೆಯ ಅರ್ಚಕರು ಆಗಮಿಸಿದ್ದಾರೆ ಇದು ನಿಜವಾದ ರಾಜ್ಯಮಟ್ಟದ ಶಿಬಿರವಾಗಿದೆ ಕೆಲವರು ಇಂಜನಿಯರ್ ಗಳು .ವೈದ್ಯರೆಲ್ಲರು ಆಗಮಿಸಿದ್ದಾರೆ ಪುರೋಹಿತರು ಮಾಡಿದ ಪಾಪವು ಊರು ತುಂಬುತ್ತದೆ ಆದ್ದರಿಂದ ಎಲ್ಲಾರಿಗೂ ದೇವರತ್ತಿರ ತಪಸ್ಸು ಮಾಡಬೇಕು , ನಾವೇಲ್ಲ ಅರ್ಚಕರು ಸಾದಕರಾಗಬೇಕು . ಇಲ್ಲಿ ನಡೆದ ವೇದ ಘೋಷ ವಾಕ್ಯವು ನಿಮ್ಮ ಮನೆಯಲ್ಲಿ ನಡೆದರೆ ಅದು ಹದಿನೆಳನೆ ಅರ್ಚಕ ಶಿಬಿರಕ್ಕೆ ಸಾರ್ಥಕವಾಗುತ್ತದೆ , ಎಂದರು .
ಇದೇ ಸಮಯದಲ್ಲಿ ಎಲ್ಲಾರಿಗೂ ಪ್ರಮಾಣ ಪತ್ರ ವಿತರಿಸಲಾಯಿತು .
ಇದೇ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು , ದೇವಾಲಯ ಸಮಿತಿಯ ಸಂಚಾಲಕರು . ಮನೋಹರ್ ಮಠದ್ ಜೀ , . ಶಿಕ್ಷಕವೃಂದದವರು . ಶಿಬೀರಾರ್ಥಿಗಳು , ಶಾಲಾ ಮಕ್ಕಳು , ಸೇರಿದಂತೆ ಇನ್ನು ಹಲವರು ಹಾಜರಿದ್ದರು

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

17 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

18 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

18 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

18 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

18 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

18 hours ago