The religious institutionalization of the Math tradition is fatal to the Basava principle
ಜಗವು ಕಂಡ ಸರ್ವ ಶ್ರೇಷ್ಠ ವಿಚಾರವಾದಿ ಬಂಡುಕೋರ ಚಿಂತಕ ಸಮಾಜವಾದಿ ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆಯ ಶಾಂತಿ ಪ್ರೀತಿಯನ್ನು ಅನುಸರಿಸುವ ವರ್ಗರಹಿತ ವರ್ಣರಹಿತ ಲಿಂಗ ಭೇದ ರಹಿತ ಆಶ್ರಮ ಭೇದವಿರದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಧರ್ಮವಾಗಿದೆ .ಅನುಭವ ಮಂಟಪವು ಶರಣರು ಜಾಗತಿಕ ಪ್ರಜಾಪ್ರಭುತ್ವಕ್ಕೆ ಕೊಟ್ಟ ಅದ್ವಿತೀಯ ಕೊಡುಗೆಯಾಗಿದೆ . ಮ್ಯಾಗ್ನ ಕಾರ್ಟಕ್ಕಿಂತ ಶತಮಾನಕ್ಕೂ ಮುಂಚೆ ಬಸವಾದಿ ಪ್ರಮಥರು ಪ್ರಜಾಪ್ರಭುತ್ವವನ್ನು ಲೋಕಶಾಹಿ ಹೊಸ ರಾಜಕೀಯ ಸಾಮಾಜಿಕ ಸಾಹಿತಿಕ ಆರ್ಥಿಕ ನೈತಿಕ ಧಾರ್ಮಿಕ ಪರ್ಯಾಯ ವ್ಯವಸ್ಥೆಯನ್ನು ಹುಟ್ಟು ಹಾಕಿದರು .ಬಸವಣ್ಣ ಎಂದರೆ ಶತಮಾನಗಳಿಂದ ಸಾಗಿ ಬಂದಿದ್ದ ಮೌಢ್ಯ ಸಂಪ್ರದಾಯಗಳನ್ನುಮೆಟ್ಟಿ ನಿಂತು ನಿತ್ಯ ನೂತನ ತತ್ವ ಸಿದ್ಧಾಂತದ ಆಚರಣೆ ರಹಿತ ಸಂಪ್ರದಾಯಗಳಿಲ್ಲದ ಶ್ರೇಣೀಕೃತವಲ್ಲದ ಸಮಾಜವನ್ನು ಕಟ್ಟಿದನು .
ಇಂದು ಬಸವ ಪರಂಪರೆ ಅನೇಕ ಮಠಗಳು ಸ್ವಾಮಿ ಅಕ್ಕನವರು ಕರ್ಮಠರಾಗಿ ಬಸವ ತತ್ವವನ್ನು ವಿರೂಪಗೊಳಿಸಿದ್ದಾರೆ. ಲಾಂಛನಧಾರಿಗಳು ಲಿಂಗ ತತ್ವವನ್ನು ಅರಿತೋ ಅರಿಯದೋ ಹೀಗೆ ಹೊಸ ಹೊಸ ಆಚರಣೆಗಳನ್ನು ಹುಟ್ಟು ಹಾಕಿ ಸಮಾಜವಾದಿ ಬಸವಣ್ಣನವರ ಆಶಯಗಳಿಗೆ ಧಕ್ಕೆ ತಂದಿದ್ದಾರೆ ತರುತ್ತಿದ್ದಾರೆ .ಬಸವ ಭಕ್ತರ ಪ್ರಜ್ಞೆ ಇತ್ತಿಚೆಗೆ ಹೆಚ್ಚುತ್ತಿದ್ದು ಇಂತಹ ಕರ್ಮಠ ಮೌಡ್ಯಗಳನು ಧಿಕ್ಕರಿಸುವ ಪ್ರತಿಭಟಿಸುವ ತಿರಸ್ಕರಿಸುವ ಕಾಲ ದೂರ ಉಳಿದಿಲ್ಲ . ಬಸವ ತತ್ವವನ್ನು ಮೂಲಸ್ವರೂಪದಲ್ಲಿ ಆಚರಣೆಗೆ ತರದೇ ಹೋದರೆ ಅನೇಕ ಇತ್ತಂಡ ವಾದಕ್ಕೆ ಗುರಿಯಾಗಿ ಅಪಹಾಸ್ಯಕ್ಕೆ ಒಳಗಾಗುವುದು ಸತ್ಯ .ಲಾಂಛನಧಾರಿಗಳು ಬಸವ ಉದ್ಯಮಿಗಳು ಬಸವಣ್ಣನ ಭಾವ ಚಿತ್ರವನ್ನು ಇಟ್ಟು ಹಣ ಸುಲಿಗೆ ಮಾಡುವ ಸರಳ ಶ್ರಮವಿಲ್ಲದ ಪದ್ದತಿಯನ್ನು ಅಳವಡಿಸಿಕೊಡಿದ್ದಾರೆ .ಇವರನ್ನು ಹೊಗಳುತ್ತಾ ತಮ್ಮ ಗ್ರಂಥಗಳನ್ನು ಪ್ರಕಟಗೊಳಿಸಿಕೊಂಡು ವಾರ್ತೆ ಕೀರ್ತಿಯ ಪೀಡೆಗೆ ಒಳಗಾಗಿ ಸತ್ಯ ಗೊತ್ತಿದ್ದರೂ ಎದ್ದು ಹೊರಗೆ ಬರದೇ ಇಂತಹ ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡ ಮಾರಾಟಕ್ಕಿಟ್ಟ ಸಾಹಿತಿಗಳು ಅಧ್ಯಾಪಕರು ಸಂಶೋಧಕರು ಭಾಷಣಕಾರರು ಪ್ಯಾಕೇಟು ಪ್ರಿಯರು .
ಬಸವ ತತ್ವಗಳ ಮೇಲೆ ಪಂಚಪೀಠದ ಸೈದ್ಧಾಂತಿಕ ದಾಳಿ ,ಬಸವ ಪರಂಪರೆ ಎಂದು ಹೇಳಿಕೊಂಡು ವ್ಯವಹಾರ ಮಾಡುವ ನೂರಾರು ಕೋಟಿ ಆಸ್ತಿ ಹೊಂದಿರುವ ವಿರಕ್ತ ಪರಂಪರೆಯ ಅಣ್ಣ ಅಕ್ಕ ಸ್ವಾಮಿಗಳು ಬಸವ ತತ್ವವನ್ನು ಸಮಾಧಿ ಮಾಡುವ ಹುನ್ನಾರ ನಡೆಸಿದ್ದಾರೆ.ಇವರ ಮಧ್ಯೆ ಮೌನವಾದ ಬಸವ ಭಕ್ತರು .ಲಿಂಗಾಯತ ಧರ್ಮದ ಅಳಿವು ಉಳಿವಿನ ಪ್ರಶ್ನೆ ಈಗ ನಮ್ಮ ಮುಂದಿದೆ .ಇತ್ತೀಚಿಗೆ ಬಸವ ಪರಂಪರೆಯ ಉನ್ನತ ಮಠದ ಸ್ವಾಮಿಗಳು ಜಗದ್ಗುರುಗಳು ಬಸವಣ್ಣವರಿಗಿಂತ ಮೊದಲು ಜೇಡರ ದಾಸಿಮಯ್ಯನವರ ಕ್ರಾಂತಿ ಅಮೋಘವಾಗಿತ್ತು ಅದು ಮುಂದೆ ಬಸವಣ್ಣವರ ಅನುಭವ ಮಂಟಪಕ್ಕೆ ಮಾದರಿಯಾಯಿತು ಎಂದು ಹುಸಿ ಸುಳ್ಳು ಹೇಳಿ ನಾಡಿನ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಗೊಳಿಸಿದ್ದಾರೆ ಯಾವೊಬ್ಬ ಮಠಾಧೀಶರು ಇದನ್ನು ಪ್ರಶ್ನಿಸಿಲ್ಲ .ಮುಂಬೈ ಬಸವ ಜಯಂತಿ ಕಾರ್ಯಕ್ರಮವೊಂದರಲ್ಲಿ ಸ್ವಾಮಿಗಳೊಬ್ಬರು ಭಾಗವಹಿಸಿ ಮಾತನಾಡಿ ಬಸವಣ್ಣ ಸಮಾನತೆಯ ಹರಿಕಾರ ಎಂದೆಲ್ಲಾ ಗುಣಗಾನ ಮಾಡಿ ಭಕ್ತರ ಮನೆಯಲ್ಲಿ ತಮಗೆ ವಿಶೇಷ ಬೆಳ್ಳಿಯ ತಾಟು ಲೋಟ ಚರಿಗೆ ಪೂಜಾ ಸಾಮಗ್ರಿಗಳು ವಿಶೇಷ ಪ್ರಸಾದದ ವ್ಯವಸ್ಥೆ . ಅಬ್ಬಬ್ಬಾ ಪಂಚ ಪೀಠದವರಿಗೆ ಇವರೇನೂ ಕಡಿಮೆ ಇಲ್ಲ ಎಂದೆನಿಸಿತು .ಜಂಗಮ ಶ್ರೇಷ್ಠತೆ ಜೇಷ್ಠತೆ ಹೋಗದ ಹೊರತು ಬಸವ ತತ್ವ ಬದುಕಲಾರದು .
ಡಾ.ಶಶಿಕಾಂತ ರು ಪಟ್ಟಣ -ರಾಮದುರ್ಗ
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…