ಕಲ್ಯಾಣಸಿರಿ ವಿಶೇಷ

ಡೀಡ್‌ ಆಫ್‌ ಡಿಕ್ಲರೇಷನ್‌ ಜತೆಗೆ ಗೃಹ ನಿವಾಸಿಗಳ ಸಂಘವನ್ನು ನೋಂದಣಿಮಾಡಿಕೊಳ್ಳುವಂತೆ ಹೈಕೋರ್ಟ್‌ ಆದೇಶ

High Court order to register house dwellers association along with deed of declaration

ಬೆಂಗಳೂರು;ಡೀಡ್‌ ಆಫ್‌ ಡಿಕ್ಲರೇಷನ್‌ ಜತೆಗೆ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ 1972ರಡಿ ಗೃಹ ನಿವಾಸಿಗಳ ಸಂಘವನ್ನು ನೋಂದಣಿ ಮಾಡಿಕೊಳ್ಳುವಂತೆ ಹೈಕೋರ್ಟ್‌ ಆದೇಶಿಸಿದೆ.
ಇದರೊಂದಿಗೆ ಸಂಘದ ನೋಂದಣಿ ಕುರಿತಂತೆ ಇದ್ದ ಗೊಂದಲ ನಿವಾರಣೆಯಾಗಿದೆ.
ಬೆಂಗಳೂರಿನ ಬಿ.ಚನ್ನಸಂದ್ರದ ಸಾಯಿ ಫ್ಲೋರಾ ರೆಸಿಡೆನ್ಸಿಯ ಅನ್ನಪ್ರಗದ ಮುರಳೀಕೃಷ್ಣ ಮತ್ತು ಎಚ್‌.ಕೆ.ಯೋಗೀಶ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಹೇಮಂತ್‌ ಚಂದನ್‌ ಗೌಡರ್‌ ಅವರಿದ್ದ ಏಕಸದಸ್ಯಪೀಠ ಈ ಅದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ನಂತರ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ, ಬೈಲಾ ಸಮೇತ ಡೀಡ್‌ ಆಫ್‌ ಡಿಕ್ಲರೇಷನ್‌ ನೊಂದಿಗೆ ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಕಾಯಿದೆಯಡಿ ಸಂಘವನ್ನು ನೋಂದಣಿ ಮಾಡಲಾಗದು ಎಂದು ಸಬ್‌ ರಿಜಿಸ್ಟಾರ್‌ 2024ರ ಫೆ.14ರಂದು ನೀಡಿದ್ದ ಹಿಂಬರಹವನ್ನು ರದ್ದುಗೊಳಿಸಿದೆ.
ಅಲ್ಲದೆ, ಸಬ್‌ ರಿಜಿಸ್ಟ್ರಾರ್‌ ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಕಾಯಿದೆ 1972ರಡಿ ಡೀಡ್‌ ಆಫ್‌ ಡಿಕ್ಲರೇಷನ್‌ ಸಹಿತ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಅನ್ನು ಮೂರು ತಿಂಗಳಲ್ಲಿನೋಂದಣಿ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದೆ.
ಸಾಯಿ ಫ್ಲೋರಾ ರೆಸಿಡೆನ್ಸಿಯ ನಿವಾಸಿಗಳೆಲ್ಲಾಸೇರಿ ತಮ್ಮದೇ ಆದ ಸಂಘವನ್ನು ರಚಿಸಲು ನಿರ್ಧರಿಸಿದ್ದರು. ಅದರಂತೆ ಅರ್ಜಿದಾರರು ಬೈಲಾದ ಜತೆ ಡೀಡ್‌ ಆಫ್‌ ಡಿಕ್ಲರೇಷನ್‌ ಸಹಿತ ತಮ್ಮ ಸಂಘವನ್ನು ನೋಂದಾಯಿಸಲು ಕಾವೇರಿ ಆನ್‌ಲೈಟ್‌ ಪೋರ್ಟ್‌ಲ್‌ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಸಬ್‌ ರಿಜಿಸ್ಟ್ರಾರ್‌ ಅವರ ಮನವಿಯನ್ನು ತಿರಸ್ಕರಿಸಿ, ಬೈಲಾದ ಜತೆ ಡೀಡ್‌ ಆಫ್‌ ಡಿಕ್ಲರೇಷನ್‌ ಸಹಿತ ಸಂಘವನ್ನು ನೋಂದಣಿ ಮಾಡಿಕೊಳ್ಳುವುದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಘವನ್ನು ರಿಜಿಸ್ಟ್ರಾರ್‌ ಆಫ್‌ ಕೋ ಆಪರೇಟಿವ್‌ ಸೊಸೈಟಿಯಡಿ ನೋಂದಾಯಿಸಿಕೊಳ್ಳುವಂತೆ ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

Mallikarjun

Share
Published by
Mallikarjun

Recent Posts

ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ

ವಿದ್ಯಾ ಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳಕುರಿತು ಸಭೆ Meeting on future plans from the educational patron   ಧಾರವಾಡ :…

20 minutes ago

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ Farmers' Central ID mandatory to avail central…

27 minutes ago

2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಆಹ್ವಾನ

2022 State Level Book Selection List Published: Objection Invited 2022ನೇ ಸಾಲಿನ ರಾಜ್ಯ ಮಟ್ಟದ ಪುಸ್ತಕ ಆಯ್ಕೆ…

49 minutes ago

ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ

Awareness program as part of World Hearing Day ವಿಶ್ವ ಶ್ರವಣ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಕೊಪ್ಪಳ…

52 minutes ago