ಕಲ್ಯಾಣಸಿರಿ ವಿಶೇಷ

ನ. 15 ಹಾಗೂ 16 ರಂದು ಅರಮನೆ ಮೈದಾನದಲ್ಲಿ ಪ್ರತಿಧೀ ಫೌಂಡೇಶನ್ ನಿಂದ “ಸ್ವಸ್ಥ ಕರ್ನಾಟಕ 2024” ರಾಷ್ಟ್ರ ಮಟ್ಟದ ಉಚಿತ ಆರೋಗ್ಯ ಶಿಬಿರ, ಆರೋಗ್ಯ ವಲಯದ ಉದ್ಯೋಗ ಮೇಳ


ಬೆಂಗಳೂರು, ನ, 14; ಪ್ರತಿಧೀ ಫೌಂಡೇಶನ್ ನಿಂದ “ಸ್ವಸ್ಥ ಕರ್ನಾಟಕ 2024” ಬೃಹತ್ ರಾಷ್ಟ್ರ ಮಟ್ಟದ ಉಚಿತ ಸಮಗ್ರ ಆರೋಗ್ಯ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ನ. 15 ಮತ್ತು 16 ರಂದು ನಗರದ ಅರಮನೆ ಮೈದಾನದ 9ನೇ ಗೇಟ್ ಪ್ರಿನ್ಸಸ್ ಶ್ರೈನ್ ನಲ್ಲಿ ಆಯೋಜಿಸಲಾಗಿದೆ.
ಸಮಗ್ರ ಆರೋಗ್ಯ ಕ್ಷೇತ್ರವನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಜೊತೆಗೆ ಆರೋಗ್ಯ ವಲಯದವರಿಗಾಗಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೇಳಕ್ಕೆ ಚಾಲನೆ ನೀಡಲಿದ್ದಾರೆ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಎಚ್‌. ಎಮ್ ರೇವಣ್ಣ, ರಾಜೀವ್ ಗಾಂಧಿ ಯೂನಿವರ್ಸಿಟಿ ಓಫ್ ಹೆಲ್ತ್ ಸೈನ್ಸಸ್, ಬೆಂಗಳೂರು ಇವೆಂಟ್ ಡೈರೆಕ್ಟರ್ ಡಾ. ಎಸ್‌. ಸಚ್ಚಿದಾನಂದ್‌ ಅವರು ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ. ಪ್ರಜ್ವಲ ರಾಜ್ ತಿಳಿಸಿದ್ದಾರೆ.

ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಉಚಿತ ಸಮಾಲೋಚನೆಗೆ ವ್ಯವಸ್ಥೆ ಮಾಡಿದ್ದು, ಇಸಿಜಿ, ಇಕೋ ಜೊತೆಗೆ ನುರಿತ ಹೃದಯ ತಜ್ಞರಿಂದ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ, ಇ.ಎನ್.ಟಿ ಪರೀಕ್ಷೆ ಮತ್ತು ಆಡಿಯೋಮೆಟ್ರಿ ಮತ್ತು ತಜ್ಞ ವೈದ್ಯರಿಂದ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಗರ್ಭ ಕಂಠದ ಕ್ಯಾನ್ಸರ್ ಪರೀಕ್ಷೆಗಳು, ಗುದ ದ್ವಾರದ ತೊಂದರೆಗಳ ಪರೀಕ್ಷೆ ಮತ್ತು ಸ್ಥನ ಕ್ಯಾನ್ಸರ್ ಪತ್ತೆ ಹಚ್ಚಲು ಮ್ಯಾಮೋಗ್ರಾಮ್, ಇತರೆ ಕ್ಯಾನ್ಸರ್ ಪತ್ತೆ ಮಾಡುವ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಗುದದ್ವಾರದ ಸಮಸ್ಯೆಗಳಿಗೆ ಪರಿಹಾರ, ಚರ್ಮ ರೋಗ ತಪಾಸಣೆ, ಫಲವತ್ತತೆ ಕುರಿತ ಸಮಾಲೋಚನೆ, ಮಕ್ಕಳ ತಜ್ಞರು, ನರರೋಗ ತಜ್ಞರು ಉಪಯುಕ್ತ ಸಲಹೆ ನೀಡಲಿದ್ದಾರೆ. ಜೊತೆಗೆ ಆರೋಗ್ಯ ವಲಯದವರಿಗೆ ಉಚಿತ ಉದ್ಯೋಗ ಮೇಳ ಹಮ್ಮಿಕೊಂಡು ಉದ್ಯೋಗಾವಕಾಶಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ : 9886533393 ಹಾಗೂ 9449097947

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

17 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

18 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

18 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

18 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

18 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

18 hours ago