ಕಲ್ಯಾಣಸಿರಿ ವಿಶೇಷ

ಕೊಳ್ಳೇಗಾಲ ಪಟ್ಟಣದ ಎಂಸಿಕೆಸಿಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನಆಯೋಜಿಸಿದ್ದಕನ್ನಡ ಮಾಸಾ ಚರಣೆ

Kannada Month’ organized by JSB Foundation today at MCKC High School, Kollegala town.

ಕೊಳ್ಳೇಗಾಲ, ನ.೧೨:ಮಾತೃಭಾಷೆ ಮಾತ್ರ ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ : ಉಪನ್ಯಾಸಕ ಸೋಮಣ್ಣ
ಕೊಳ್ಳೇಗಾಲ ಪಟ್ಟಣದ ಎಂಸಿಕೆಸಿ ಪ್ರೌಢಶಾಲೆಯಲ್ಲಿ ಇಂದು ಜೆಎಸ್’ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಕನ್ನಡತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಪಟ್ಟಣದ ಮಾನಸ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸೋಮಣ್ಣನವರು, ಮಾತೃಭಾಷೆ ಶಿಕ್ಷಣ ವಿಚಾರವಾಗಿ ಉಪನ್ಯಾಸ ನೀಡಿದರು. ಕನ್ನಡ ಭಾಷೆ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಇರುವ ಬಹಳ ದೊಡ್ಡ ಸಮಸ್ಯೆ ಏನೆಂದರೆ ನಮ್ಮಲ್ಲಿ ಬಹುಮಂದಿಗೆ, ಅಂದರೆ ಶೇ.90 ಜನರಿಗೆ ನಿಜವಾದ ಶಿಕ್ಷಣ ಎಂದರೇನೆಂಬುದರ ಕಲ್ಪನೆಯೇ ಇಲ್ಲದಿರುವುದು. ಗರಿಷ್ಠ ಅಂಕಗಳನ್ನು ಗಳಿಸಿ ಒಳ್ಳೆಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆದು ಹೆಚ್ಚು ಹಣ ಗಳಿಸಿಕೊಡುವ ಉದ್ಯೋಗಗಳಿಗೆ ಸೇರುವುದೇ ಶಿಕ್ಷಣ ಎಂದು ಬಹುಮಂದಿ ಭಾವಿಸುತ್ತಾರೆ. ಇನ್ನು ಕೆಲವರಿಗೆ ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಏನು ಅಗತ್ಯ ಇದೆಯೋ ಅದನ್ನು ಕೊಡುವುದೇ ಶಿಕ್ಷಣ. ಇನ್ನುಳಿದವರಿಗೆ ಏನೋ ಒಂದಷ್ಟು ಓದಿ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುವುದು. ಒಟ್ಟಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಪದವಿಗಳ ಸಂಪಾದನೆಯೇ ಶಿಕ್ಷಣದ ಅಂತಿಮ ಗುರಿ; ಅಷ್ಟೆ.
ವ್ಯಕ್ತಿಯ ಸುಪ್ತ ಪ್ರತಿಭೆಯನ್ನು ಪ್ರಕಟಪಡಿಸಲು ಅವಕಾಶ ನೀಡಿ, ವ್ಯಕ್ತಿತ್ವವನ್ನು ರೂಪಿಸಿ ಸತ್ಪ್ರಜೆಗಳನ್ನು ಸೃಷ್ಟಿಸುವುದೇ ಶಿಕ್ಷಣ. ಜೊತೆ ಜೊತೆಗೆ ಹೊಟ್ಟೆಪಾಡಿಗೆ ಬೇಕಾದ ಅರ್ಹತೆಗಳನ್ನೂ ಪಡೆದುಕೊಳ್ಳುತ್ತಾ ಅಂತಃಶಕ್ತಿಯನ್ನು ವಿಕಾಸಗೊಳಿಸಿಕೊಳ್ಳುವ ಒಂದು ಬೌದ್ಧಿಕ, ಮಾನಸಿಕ ಮತ್ತು ದೈಹಿಕ ವ್ಯಾಯಾಮವೇ ಶಿಕ್ಷಣ ಎಂಬ ಜಾಗೃತ ಪ್ರಜ್ಞೆಯ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಅರ್ಥೈಸಿಕೊಳ್ಳಬೇಕಾಗಿದೆ. ಶಿಕ್ಷಣದಲ್ಲಿ ಪ್ರಾಥಮಿಕ ಹಂತ ಬಹಳ ಪ್ರಮುಖವಾದದ್ದು. ಆಗ ಮಗು ತನಗೆ ಹಿತವಾದ, ಪ್ರಿಯವಾದ, ಸುಲಭವಾದ ಭಾಷೆಯಲ್ಲಿ ಮಾತ್ರ ಜ್ಞಾನಾರ್ಜನೆ ಮಾಡಬಲ್ಲದು. ಅದರಲ್ಲೂ ತನ್ನ ಅನುಭವಕ್ಕೆ ಬಾರದ ವಿಷಯಗಳನ್ನು ತನಗೆ ಸುಖವಲ್ಲದ ಭಾಷೆಯ ಮೂಲಕ ಕಲಿಯಲು ಯಾವ ಮಗುವೂ ಆಸಕ್ತಿಯನ್ನು ತೋರಲಾರದು. ಗಣಿತ, ಅನುಪಾತ, ಇತಿಹಾಸ, ರಾಜಕೀಯ, ಭೂಗೋಳ, ಖಗೋಳಗಳನ್ನು ಪಾಠ ಮಾಡುವಾಗ ಮಾತೃಭಾಷೆ ಬಳಸಿದರೆ ಮಗು ಕನಿಷ್ಠ ಪಕ್ಷ ತನಗೆ ಅರ್ಥ ಆಗಲಿಲ್ಲ ಅಂತ ಹೇಳುವ ಧೈರ್ಯವನ್ನು ತೋರುತ್ತದೆ. ಪ್ರಶ್ನಿಸಬೇಕೆನಿಸಿದರೂ ಅನ್ಯಭಾಷೆಯ ತೊಡಕಿನಿಂದಾಗಿ ಹಿಂಜರಿಯುತ್ತದೆ. ತನ್ನದೇ ಭಾಷೆಯಾದರೆ ಪ್ರಶ್ನಿಸುತ್ತದೆ. ಮಕ್ಕಳಿಗೆ ಬೋಧನೆ ಮಾಡುವಾಗ ಅದು ಕ್ರೀಡೆಯಂತೆ ಆನಂದದಾಯಕವಾಗಿರಬೇಕಾದರೆ ಮಾಧ್ಯಮ ಮಾತೃಭಾಷೆಯಾಗಿರಬೇಕಾದ್ದು ಕಡ್ಡಾಯ ಎಂದು ಜಗತ್ತಿನ ಎಲ್ಲಾ ಶಿಕ್ಷಣ ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್’ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್, ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಅದ್ದರಿಂದ ನಾವೆಲ್ಲರೂ ಕನ್ನಡ ಮಾದ್ಯಮದಲ್ಲಿಯೇ ಶಿಕ್ಷಣ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಎ ಎನ್ ವೆಂಕಟೇಶಮೂರ್ತಿ, ಸಹ ಶಿಕ್ಷಕರಾದ ಅಮೀತಾನಂದ, ಸುಧಾಕರ, ಸುಶೀಲಮ್ಮ, ಸಿಬ್ಬಂದಿಗಳು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.‌

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

16 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

16 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

16 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

16 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

16 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

16 hours ago