Biyapur for Rayareddy game, CEO don’t care for Thandagi letter!?
ವಿಶ್ವಕರ್ಮ ಅಧಿಕಾರೇತರ ಸದಸ್ಯರ ಆಯ್ಕೆಯಲ್ಲಿ ಯುವಕರಿಗೆ ಅನ್ಯಾಯನಾ..?
ವಿಶೇಷ ವರದಿ- ಬ್ರಹ್ಮಾನಂದ್ ಮಳಿಯಪ್ಪ ಬಡಿಗೇರ್
ಕೊಪ್ಪಳ ನವೆಂಬರ್ 12: ವಿಶ್ವಕರ್ಮ ಸಮುದಾಯದ ಜನಾಂಗದವರಿಗೆ ಎರಡು ವರ್ಷಗಳ ಅವಧಿಗೆ ಓರ್ವ ಅಧಿಕಾರೇತರ ನಾಮನಿರ್ದೇಶತ ಸದಸ್ಯರನ್ನ ನೇಮಕ ಮಾಡುವ ವಿಚಾರದಲ್ಲಿ ವಿದ್ಯಾವಂತರಿಗೆ ಹಾಗೂ ಯುವಕರಿಗೆ ಅನ್ಯಾಯವಾಗಿದೆ ಎಂಬುವುದು ಸಮಾಜದ ಯುವಕರಲ್ಲಿ ವ್ಯಕ್ತವಾಗಿದೆ. ಹೌದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವಕರ್ಮ ಸಮುದಾಯದ
ಜನಾಂಗದವರಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಕನಿಷ್ಠ 35 ರಿಂದ ಗರಿಷ್ಠ 65 ವರ್ಷ ವಯೋಮಿತಿ ಒಳಗಿರುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಿರುತ್ತದೆ. ಕನಿಷ್ಠ 35 ವರ್ಷ ಮೇಲ್ಪಟ್ಟ ವಿದ್ಯಾವಂತರು, ಸಮಾಜ ಸೇವಕರು ಹಾಗೂ ಜನಪ್ರತಿನಿಧಿಗಳ ಬೆಂಬಲ ಇಲ್ಲದ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೆ, ಅಧಿಕಾರಿಗಳು ಸಂಪೂರ್ಣ ಕಡೆಗಣಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ವಿಶ್ವಕರ್ಮ ಸಮಾಜದ ಯುವಕರು ಈ ಬಾರಿ ವಿಶ್ವಕರ್ಮ
ಅಭಿವೃದ್ಧಿ ನಿಗಮದ ಅಧಿಕಾರೇತರ ನಾಮನಿರ್ದೇಶತ ಸದಸ್ಯರ ಆಯ್ಕೆಯಲ್ಲಿ ಕನಿಷ್ಠ 35 ವರ್ಷ ಮೇಲ್ಪಟ್ಟ ಗರಿಷ್ಠ 45 ವರ್ಷದ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವಂತೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆಯ ರವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಅರ್ಜಿಯಲ್ಲಿ ಕನಿಷ್ಠ 35 ವರ್ಷದ ಯುವಕರು ಸಲ್ಲಿಸಿರುವ ಅರ್ಜಿಯನ್ನ ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಅರ್ಜಿ ಆಗಿದ್ರೆ, ಅಧಿಕಾರಿಗಳು ಅವರ ಅರ್ಜಿ ಪರಿಶೀಲಿಸಿ ಸದಸ್ಯರನ್ನಾಗಿ ಆಯ್ಕೆ ಮಾಡಬಹುದಿತ್ತು. ಇಲ್ಲಿಯವರೆಗೆ 35 ವರ್ಷದ ಮೇಲ್ಪಟ್ಟ 45 ವರ್ಷ ಒಳಗಿನ ವ್ಯಕ್ತಿಗಳಿಗೆ ಅಧಿಕಾರೇತರ ನಾಮನಿರ್ದೇಶತ ಸದಸ್ಯರನ್ನಾಗಿ ಆಯ್ಕೆ ಮಾಡುವಲ್ಲಿ ಅಧಿಕಾರಿಗಳು ಯಾಕೋ ಮನಸ್ಸು ಮಾಡುತ್ತಿಲ್ಲ.ಯುವಕರು ಕನಿಷ್ಠ ಒಂದು ಅರ್ಜಿ ಸಲ್ಲಿಸಬೇಕಾದರೆ ಸರಿ ಸುಮಾರು ಮೂರ್ನಾಲ್ಕು ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಇಷ್ಟೆಲ್ಲಾ ಹಣವನ್ನ ಖರ್ಚು ಮಾಡಿ ಯುವಕರು ಅರ್ಜಿ ಸಲ್ಲಿಸಿದರು, ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಯುವಕರನ್ನ ಹಾಗೂ ವಿದ್ಯಾವಂತರನ್ನ ಕಡೆಗಣಿಸುತ್ತಿದ್ದಾರಾ ಎಂದು ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ತಿಳಿದು, ತಿಳಿಯದೆ ತಪ್ಪು ಮಾಡುತ್ತಿದ್ದಾರಾ ಅಥವಾ ಯುವಕರನ್ನ ಕಡೆಗಣಿಸುತ್ತಿದ್ದಾರಾ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿರವರು ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರವರು ಸೋತಿದ್ದಾರೆ. ಅವರಿಗೆ ಮುಂದೆ ಅನುಕೂಲವಾಗಲೆಂದು ಕುಷ್ಟಗಿ ಕ್ಷೇತ್ರದ ವಿಶ್ವಕರ್ಮ ಸಮಾಜದವರನ್ನು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ನಾಮನಿರ್ದೇಶತ ಸ್ಥಾನಕ್ಕೆ ನೇಮಕ ಮಾಡಲೆಂದೇ ನಾನು ಅವರಿಗೆ ನನ್ನ ಲೆಟರ್ ಕೊಟ್ಟಿದ್ದೇನೆ, ಎಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ವಿಶ್ವಕರ್ಮ ಸಮಾಜದ ವ್ಯಕ್ತಿಗಳಿಗೆ ಸಚಿವರು ಹೇಳಿದ್ದಾರೆ. ಅಮರೇಗೌಡ ಬಯ್ಯಾಪುರವರು ತಮ್ಮ ಕ್ಷೇತ್ರದ ವ್ಯಕ್ತಿಯನ್ನು ನೇಮಿಸಲು ಹರಸಾಹಸ ಪಡುತ್ತಿರುವಾಗ, ಯಲಬುರ್ಗಾ ಕ್ಷೇತ್ರದ ಶಾಸಕರಾದ ಬಸವರಾಜ್ ರಾಯರೆಡ್ಡಿರವರ ಒಂದೇ ದೂರವಾಣಿ ಕರೆಗೆ ಸಿಇಓ ರಾಹುಲ್ ರತ್ನಂ ಪಾಂಡೆಯ ರವರೆಗೆ ಶಿವರಾಜ ತಂಗಡಗಿ, ಅಮರೇಗೌಡ ಲೆಟರ್ ಕೊಟ್ಟರು ಬೇರೆಯವರನ್ನು ಆಯ್ಕೆ ಮಾಡಿದ್ದಾರೆ. ಅಂದರೆ ಅವರ ಲೆಟರ್ ಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಡೋಂಟ್ ಕೇರ್ ಅಂದ್ರ ಎಂಬ ಅಭಿಪ್ರಾಯ ಈಗ ಮೂಡಿದೆ.
(ಅಮರೇಗೌಡ ಪಾಟೀಲ್ ಬಯ್ಯಾಪುರ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಅವರ ಬೆಂಬಲಿಗರಿಗೆ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ಸದಸ್ಯರ ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ.)
( ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಕಾರ್ಯಗಳನ್ನ ಮಾಡುವ ಸಲುವಾಗಿ ಅರ್ಜಿ ಸಲ್ಲಿಸಿದ್ದೇನೆ. ಅಧಿಕಾರಿಗಳು ನನ್ನ ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಅರ್ಜಿ ತಪ್ಪಾಗಿದ್ದರೆ ನನಗೆ ಮಾಹಿತಿ ಕೊಡಬಹುದಿತ್ತು ಆದರೆ ಅರ್ಜಿಯನ್ನ ಪರಿಶೀಲಿಸದೆ ನನಗೆ ಮಾಹಿತಿಯನ್ನು ನೀಡದೆ ಏಕ ಪಕ್ಷಯವಾಗಿ ವಿದ್ಯಾವಂತ ಯುವಕರನ್ನ ಕಡೆಗಣಿಸಿರುವುದು ನಿಜಕ್ಕೂ ದುರಂತ. ಯುವಕರನ್ನ ಆಯ್ಕೆ ಮಾಡದೆ ಯುವಕರಿಗೆ ಆದ ಅನ್ಯಾಯವನ್ನ ಸರಿಪಡಿಸುವಂತೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ದೂರು ನೀಡುತ್ತೇನೆ.
ಪ್ರಶಾಂತ್ ವಿಶ್ವ ಬ್ರಾಹ್ಮಣ, ಅರ್ಜಿದಾರ)
( ಕುಷ್ಟಗಿ ಮಾಜಿ ಶಾಸಕರು ಕೊಪ್ಪಳ, ಜಿಲ್ಲಾ ಉಸ್ತುವಾರಿ ಸಚಿವರು ನನಗೆ ಬೆಂಬಲಿಸಿ ಅವರ ಲೆಟರ್ ಕೊಟ್ಟರು ಅಧಿಕಾರಿಗಳು ಬದಲಾವಣೆ ಮಾಡಿದ್ದಾರೆ. ಪ್ರತಿ ಸಲ 55 ರಿಂದ 60 ವರ್ಷ ಮೇಲ್ಪಟ್ಟವರನ್ನೆ ನೇಮಕ ಮಾಡುವುದಾದರೆ,ಸಿಇಓ ಅವರು ಕನಿಷ್ಠ 35 ರಿಂದ ಗರಿಷ್ಠ 45 ವರ್ಷದ ವ್ಯಕ್ತಿಗಳನ್ನ ಅರ್ಜಿ ಕರೆಯಬಾರದಿತ್ತು. ಅರ್ಜಿ ಸಲ್ಲಿಸಲು ಹಣ ಕಳೆದುಕೊಂಡಿದ್ದೇನೆ. ನನಗೆ ಅನ್ಯಾಯವಾಗಿದೆ. ನಾನು ಖಂಡಿತ ಕಾನೂನು ಹೋರಾಟ ಮಾಡುತ್ತೇನೆ. ನನ್ನ ಪರವಾಗಿ ವಕೀಲರು ಮಾಹಿತಿ ಕೇಳಿದರೆ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಿಲ್ಲ, ಸೋಮವಾರ ಅಥವಾ ಮಂಗಳವಾರ ಕಾದು ಖಂಡಿತ ಕಾನೂನು ಹೋರಾಟ ಆರಂಭಿಸುತ್ತೇನೆ. ಈರಪ್ಪ ಕಮ್ಮಾರ್ ಅರ್ಜಿದಾರ)
( ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ನಾಮನಿರ್ದೇಶತ ಸದಸ್ಯರನ್ನಾಗಿ ಯಲಬುರ್ಗಾ ತಾಲೂಕಿನ ರಾಜೂರು ಗ್ರಾಮದ ದೇವೇಂದ್ರಪ್ಪ ರವರನ್ನ ನೇಮಕ ಮಾಡಲಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆ ಮತ್ತೊಮ್ಮೆ ಅರ್ಜಿಯನ್ನು ಪರಿಶೀಲಿಸುವಂತೆ ಜಿಲ್ಲಾ ಪಂಚಾಯತ್ ಸಿಇಓ ರವರು ಸೂಚನೆ ಕೊಟ್ಟಿದ್ದಾರೆ. ಕರಿಯಪ್ಪ,
ವಿಶ್ವಕರ್ಮ ಅಭಿವೃದ್ಧಿ ನಿಗಮ ಅಧಿಕಾರಿ ಕೊಪ್ಪಳ)
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…