A young man who saw success even in death
ಗಂಗಾವತಿ: ನೇತ್ರದಾನ ಮಹಾದಾನ ಎನ್ನುತ್ತೇವೆ. ಆದರೆ ಯೌವ್ವನದಲ್ಲಿ ನೇತ್ರದಾನ ಮಾಡಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ ಹೋಗಿದ್ದಾನೆ ಭಟ್ಟರ ಹಂಚಿನಾಳ ಗ್ರಾಮದ ಯುವಕ ಶಿವಾಜಿ ಗಣೇಶ್ ಚಿಟ್ಟೂರಿ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿವಾಜಿ ಗಣೇಶ್‌ನನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಮೆದುಳು ನಿಷ್ಕಿçಯೆ ಆಗಿತ್ತು. ಮರಳಿ ಗಂಗಾವತಿಗೆ ಬರುವಾಗ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಬಳ್ಳಾರಿಯ ವಿಮ್ಸ್ನ ನಿತ್ಯ ಜ್ಯೋತಿ ಕಣ್ಣಿನ ವಿಭಾಗದ ತಂಡ ಕರೆಸಿ ಗಂಗಾವತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವಕನ ಕಣ್ಣುಗಳನ್ನು ದಾನ ಪಡೆದಿದ್ದಾರೆ.
ಅಂತಹ ಸಂದರ್ಭದಲ್ಲಿಯೂ ಮಗನ ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದ ಪರಂಜ್ಯೋತಿಯವರ ಸಾಮಾಜಿಕ ಕಳಕಳಿ, ಹೃದಯವಂತಿಕೆ, ದುಃಖದಲ್ಲಿಯೂ ಮಾನವೀಯ ಧೈರ್ಯ ಮೆಚ್ವಲೇಬೇಕು.
ಈ ಕಾರ್ಯಕ್ಕೆ ಡಾ|| ಹನುಮಂತಪ್ಪ, ಡಾ|| ಈಶ್ವರ ಸವಡಿ, ಡಾ|| ಮಾದವಶೆಟ್ಟಿ ಅವರು ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯಶ್ವರರಾವ್, ಕಾರ್ಯದರ್ಶಿ ಲ. ರಾಘವೇಂದ್ರ ಸಿರಿಗೇರಿ, ಸದಸ್ಯರಾದ ಲ. ಪ್ರಭುರೆಡ್ಡಿ ಹಾಗೂ ವೈದ್ಯರಾದ ಡಾ|| ವೆಂಕಟೇಶ ಇತರರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…