Uplift the community and you will go even higher: Bheem Sena Sangh President Bharat Bellary.
ವರದಿ : ಬಂಗಾರಪ್ಪ .ಸಿ.
ಚಾಮರಾಜನಗರ :ಹನೂರು ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಭೀಮಸೇನಾ ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘ ಹನೂರು ತಾಲೂಕು ಶಾಖೆ ಏರ್ಪಡಿಸಲಿರುವ ಪದಾಧಿಕಾರಿಗಳ ಪದಗ್ರಹಣ ಮತ್ತು ನಿವೃತ್ತ ನೌಕರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಭರತ ಬಳ್ಳಾರಿ ಮಾತನಾಡಿದರು. ಸಮುದಾಯದ ಜನತೆ ಎಡಗೈ ಬಲಗೈ ಎಂಬುವುದನ್ನು ಮರೆತು ಸಮುದಾಯದ ಆಶಯಗಳಂತೆ ಅಭಿವೃದ್ಧಿ ಹೊಂದಬೇಕು ಡಾಕ್ಟರ್ ಅಂಬೇಡ್ಕರ್ ಹೇಳಿದಂತೆ ನಡೆದು ಆಡಳಿತ ಹಿಡಿಯಬೇಕು ಎಂದರು. ಅಧ್ಯಕ್ಷತೆಯ ವಹಿಸಿದ್ದ ಮನೋರಚಿತ ಬಂತೇಜಿಯವರು ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ನಿಮ್ಮಲ್ಲಿ ಇರುವ ಜ್ಞಾನ ಮತ್ತು ತೋಳ್ಬಲದಿಂದ ಬದುಕಿ ಉನ್ನತಿ ಹೊಂದಬೇಕು ಎಂದರು. ಈ ವೇಳೆ ನಿವೃತ್ತ ನೌಕರರ ಆರಾಧ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್ ಜಯಕಾಂತ ಪ್ರಾಂಶುಪಾಲರಾದ ಜಯಪ್ರಕಾಶ್ ಮುಖ್ಯ ಶಿಕ್ಷಕರಾದ ಬಾಬು ಮುಖ್ಯ ಶಿಕ್ಷಕ ರುದ್ರ ಸ್ವಾಮಿ ಬಸವರಾಜು ಶಿವಮಾದಯ್ಯ ಶಿಕ್ಷಕಿ ಶಿವಮ್ಮ ಪ್ರಥಮ ದರ್ಜೆ ಸಹಾಯಕ ಶಾಂತರಾಜು ದೈಹಿಕ ಶಿಕ್ಷಣ ಪರಿವೀಕ್ಷಕ ಬಸಪ್ಪ ಅಂಗನವಾಡಿ ಕಾರ್ಯಕರ್ತೆ ಪುಟ್ಟಬಸಮ್ಮ ಅಡಿಗೆಯವರು ಲಿಂಗರಾಜು ನಿಲಯ ಪಾಲಕ ಮಹದೇವು ರವರಿಗೆ ಗೌರವ ಸಮರ್ಪಣೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕ ರಾಜ್ಯಾಧ್ಯಕ್ಷ ಡಾಕ್ಟರ್ ಬಿ ಡಿ ಇಂದ್ರಕುಮಾರಿ ಪ್ರಧಾನ ಕಾರ್ಯದರ್ಶಿ ಎಸ್ ದೇವರಾಜಯ್ಯ ದೈಹಿಕ ಪರಿವೀಶಕ ಬಸವರಾಜು ಪ್ರಾಂಶುಪಾಲರಾದ ಡಾ. ಬಿ ದೇವರಾಜ್ ರಮೇಶ್ ಕೊಳ್ಳೇಗಾಲ ಶಿಕ್ಷಕರ ಸಂಘದ ಶ್ರೀಧರ್ ನಂದೀಶ್ ಭಾಗ್ಯಮ್ಮ ನಿರೂಪಣೆ ಕೆಂಚಪ್ಪ, ಪದಗ್ರಹಣ ಅಪಡೆದ ಮಹಿಳಾ ಘಟಕದ ಅಧ್ಯಕ್ಷ ಎಚ್ಎಸ್ ಸಾವಿತ್ರಿ ಪುರುಷ ಘಟಕದ ಅಧ್ಯಕ್ಷ ಎನ್ ರಮೇಶ್ ಮತ್ತು ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ಹನೂರಿನ ಭೀಮಸೇನಾ ರಾಜ್ಯ ಸರ್ಕಾರಿ ನೌಕರರ ಸಂಘದ ಪದಗ್ರಹಣ ಮಾಡಿದವರು ಪುರುಷ ಘಟಕ ಅಧ್ಯಕ್ಷರು ಎನ್ ರಮೇಶ ಪ್ರಧಾನ ಕಾರ್ಯದರ್ಶಿ ಎಸ್ ನಂಜುಂಡಯ್ಯ ಉಪಾಧ್ಯಕ್ಷ ಪಶುಪತಿ, ಖಜಾಂಚಿ ಕೆಂಚಪ್ಪ ಸಹ ಕಾರ್ಯದರ್ಶಿ ವೆಂಕಟೇಶ್ ಮಧು ಕುಮಾರ್. ಮಹಿಳಾ ಘಟಕದ ಅಧ್ಯಕ್ಷ ಎಚ್ ಸಾವಿತ್ರಿ ಉಪಾಧ್ಯಕ್ಷ ಶಿವಮ್ಮ ಪ್ರಧಾನ ಕಾರ್ಯದರ್ಶಿ ರೂಪಶ್ರೀ ಖಜಾಂಚಿ ಲಲಿತ ಸೊಸೆ ಮೇರಿ ಸುಧಾರಾಣಿ.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…