Ready for any struggle to solve the problem of teachers: Puttanna
ಬೆಂಗಳೂರು, ಸೆ, 19;ಅನುದಾನ ರಹಿತ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ರೀತಿ ಹೋರಾಟಕ್ಕೆ ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದ್ದಾರೆ.
ವಿವಿ ಪುರಂನ ಶ್ರೀ ವಾಸವಿ ಕನ್ವೆನ್ಸನ್ ಸೆಂಟರ್ ನಲ್ಲಿ ಬೆಂಗಳೂರು ದಕ್ಷಿಣ ವಲಯ 1 ಹಾಗೂ 2 ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಹಲವು ಬೇಡಿಕೆಗಳು ದೀರ್ಘಕಾಲದಿಂದ ಈಡೇರಿಲ್ಲ. ಈ ಸಂಬಂಧ ಸರ್ಕಾರದ ಜೊತೆ ಸಂಧಾನ ಮಾತುಕತೆ ನಡೆಸುತ್ತೇನೆ. ಸಾಧ್ಯವಾಗದಿದ್ದರೆ ಹೋರಾಟ ಮಾಡುತ್ತೇನೆ, ಹೋರಾಟ ತಮಗೆ ಹೊಸದಲ್ಲ. ವಿದ್ಯಾರ್ಥಿ ಹಂತದಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ತಾವು ಅನ್ನದಾಸೋಹದ ಮೂಲಕ ಶಾಲೆಗಳ ಜೊತೆ ನಿಕಟ ಬಾಂಧವ್ಯ ಹೊಂದಿದ್ದು, ಶಿಕ್ಷಕರು ವಿದ್ಯಾರ್ಥಿಗಳ ನಿಜವಾದ ಮಾರ್ಗದರ್ಶಕರು ಎಂದರು.
ಕ್ಯಾಮ್ಸ್ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಕ್ರೇಡೋ ಅರ್ಲಿ ಚೈಲ್ಡ್ ಹುಡ್ ಸಲ್ಯುಷನ್ಸ್ ಸಹ ಸಂಸ್ಥಾಪಕರಾದ ಮೃದುಲ ಶ್ರೀಧರ್, ಒಕ್ಕಲಿಗ ಸಂಘದ ನಿರ್ದೇಶಕ ವೆಂಕಟರಾಮೇಗೌಡ, ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ 1 ಮತ್ತು 2 ಅಧ್ಯಕ್ಷರಾದ ಜಯಪ್ರಕಾಶ್, ಗಿನ್ನಿಸ್ ವಿಶ್ವ ದಾಖಲೆದಾರರು, ಬಸವೇಶ್ವರ ಶಾಲೆಯ ಮುಖ್ಯಸ್ಥೆ ರಂಗಲಕ್ಷ್ಮಿ ಶ್ರೀನಿವಾಸ ಮತ್ತಿತರರು ಪಾಲ್ಗೊಂಡಿದ್ದರು.
Ben.V. Result: Sanjana S.A, Lavanya Yadav R. of APS Educational Institute rank first ಬೆಂ.ವಿವಿ ಫಲಿತಾಂಶ…
Cancel my account and give me all the money in my account. ನನ್ನ ಅಕೌಂಟನ್ನು ಕ್ಯಾನ್ಸಲ್…
ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…
Devotee's iPhone fell into his pocket! Alas, it ended after falling into his pocket. ಹುಂಡಿಗೆ…
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…