ಕಲ್ಯಾಣಸಿರಿ ವಿಶೇಷ

ಕೊಪ್ಪಳ ಭಾಗ್ಯ ನಗರ ಮೇಲ್ ಸೇತುವೆ ಮೇಲೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ.

Take action to prevent waterlogging on Koppal Bhagya Nagar Over Bridge.

ಕೊಪ್ಪಳ ನಗರದಿಂದ ಭಾಗ್ಯನಗರಕ್ಕೆ ಮೇಲ್ ಸೇತುವೆ ನಿರ್ಮಾಣವಾಗಿ  ಕೆಲವೇ ವರ್ಷಗಳಾಗಿವೆ. ಆದರೆ ಮೇಲ್ ಸೇತುವೆ ಮೇಲೆ  ಮಳೆ ಬಂದರೆ ಸಾಕು ನೀರು ನಿಂತು  ಗುಂಡಿ ಬಿದ್ದಿರುವುದು  ಅಧಿಕಾರಿಗಳು ಗಮನಿಸಿದ್ದರು ಸುಮ್ಮನಿದ್ದಾರೆ.
ನೀರು ನಿಂತ ಮೇಲೆ ಅದರ ಮೇಲೆ ಬೃಹತ್ ಘನವಾಹನಗಳು  ದಿನನಿತ್ಯ ಸಂಚಾರ ಮಾಡುತ್ತಿವೆ. ರೈಲ್ವೆ  ಗೂಡ್ಸ ವಾಹನಗಳು ಬಂದಾಗ  ಅದರ ಅಂಡ್ ಲೋಡ್ ಮಾಡಿ ಲಾರಿಯಲ್ಲಿ ತುಂಬಿಕೊಂಡು  ಇದೇ ಮೇಲ್ ಸೇತುವೆ ಮೂಲಕ  ವಿವಿಧ ಗೊಡಾನ್  ಸೇರುತ್ತದೆ.
ಮೇಲ್ ಸೇತುವೆ ಮೇಲೆ  ಗುಂಡಿಯ ಒಳಗಿಂದ   ಕಬ್ಬಿಣದ ರಾಡುಗಳು ಕಾಣುತ್ತಿರುವುದು  ಇನ್ನಷ್ಟು ಅಪಾಯಕಾರಿಯಾಗುವ ಲಕ್ಷಣಗಳು ಕಾಣುತ್ತಿವೆ. ಇತ್ತೀಚಿನ ದಿನಗಳಲ್ಲಿ  ಬೇರೆ ಬೇರೆ ರಾಜ್ಯಗಳಲ್ಲಿ  ಇಂಥ  ಮೇಲ್ ಸೇತುವೆ ಕುಸಿದು ಬಿದ್ದಿರುವುದು ನಮ್ಮ ಕಣ್ಣು ಮುಂದೆ ರಾಚ್ಚುವಂತಿದೆ. ಇಂಥ ಅಪಾಯ ಸಂಬವಿಸುವ ಮುನ್ನ  ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು  ಮೇಲ್ ಸೇತುವೆ ಮೇಲೆ ಆಗಿರುವ ನಮಸ್ಯೆಯನ್ನು ಪರಿಶೀಲಿಸಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ  ಶರಣು ಗಡ್ಡಿ ಹಾಗೂ ಕೊಪ್ಪಳದ ನಾಗರಿಕರ  ಮಾನನಿಯಾಗಿದೆ.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

9 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

9 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

9 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

9 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

9 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

10 hours ago