ಕಲ್ಯಾಣಸಿರಿ ವಿಶೇಷ

BJP ಸೋಲಿಸಿ ಭಾರತ ಉಳಿಸಿ-ಎಸ್.ಎಫ್.ಐ


ಹೊಸಪೇಟೆ: ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಸಂದರ್ಭದಲ್ಲಿ ನಾವಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣವೇ ಸಾರ್ವತ್ರಿಕ ಲೋಕಸಭಾ ಚುನಾವಣೆ ಆದ್ದರಿಂದ ಇಂದು ಎಸ್.ಎಫ್.ಐ ಸಂಘಟನೆ ಕೋಮುವಾದಿ ಬಿ.ಜೆ.ಪಿಯನ್ನು ಸೋಲಿಸುವುದು ಬಹುಮುಖ್ಯ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ ಹೇಳಿದರು.

ಅವರು ವಿಜಯನಗರ ಜಿಲ್ಲೆಯಲ್ಲಿ ಇಂದು ಪತ್ರಿಕೆ ಗೋಷ್ಠಿ ಉದ್ದೇಶಸಿ ಮಾತನಾಡಿದರು ಜಗತ್ತಿನ ಅನೇಕ ದೇಶಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಆದರೆ ಭಾರತದಲ್ಲಿ ಶಿಕ್ಷಣ ವಿರೋಧಿ ಸರ್ಕಾರವಿದೆ. ಉದಾಹರಣೆಗೆ ಜಪಾನ್ 10ಲಕ್ಷ ಜನರಿಗೆ 5ಸಾವಿರ ಸಂಶೋಧಕರಿದ್ದಾರೆ. ನಮ್ಮಲ್ಲಿ 10 ಜನರಿಗೆ ಕೇವಲ 5 ಜನ ಮಾತ್ರ ಸಂಶೋಧಕರ ಇದ್ದರೆ. ಬಿ.ಜೆ.ಪಿ ಸರ್ಕಾರ ಬಂದಾಗಿನಿಂದ ಕಳೆದ ಐದು ವರ್ಷದಲ್ಲಿ ಸುಮಾರು ಪ್ರತಿ ತಿಂಗಳು ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವಿದ್ಯಾರ್ಥಿಗಳು ಶೈಕ್ಷಣಿಕ ಕಾರಣಕ್ಕಾಗಿ ದೇಶದಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕರಣ ಮಾಡಿದ್ದಲ್ಲದೆ, ಜೆ.ಎನ್.ಯು ನಲ್ಲಿ ಖಾಸಗಿ ಮ್ಯಾನೇಜ್ಮೆಂಟ್ ಕೋರ್ಸ್ ತೆರೆಯಲಾಗಿದೆ. ಇದನ್ನು ಪ್ರಶ್ನೆಸುವ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿ ಅವರ ಅಧ್ಯಯನ ಮೊಟುಕುಗೊಳಿಸಿ ಇಲ್ಲವೇ ನಿರಂತರ ಕಿರುಕುಳ ನೀಡಿ ಸುಸೈಡ್ ಮಾಡಿಕೊಳ್ಳುವಂತೆ ಮಾಡಿಕೊಳ್ಳುವ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಆದ್ದರಿಂದ ರಿಜೆಕ್ಟ್ ಎನ್.ಇ.ಪಿ, ರಿಜೆಕ್ಟ್ ಬಿ.ಜೆ.ಪಿ ಎಂದು ದೇಶದಾದ್ಯಂತ SFI ಸಂಘಟನೆ ಹೋರಾಟಕ್ಕೆ ಕರೆ ಕೊಟ್ಟಿದೆ. ಈ ಹೋರಾಟ ನಿರಂತರವಾಗಿದೆ. ಎನ್.ಇ.ಪಿ ಈ ದೇಶದ ಸೌಹಾರ್ದತೆಗೆ, ಜಾತ್ಯತೀತತೆಗೆ ಧಕ್ಕೆ ತರುತ್ತಿದೆ. ಮಾನವಿಯ ಮೌಲ್ಯಗಳ ಮೇಲೆ ನಂಬಿಕೆ ಇಲ್ಲ. ದಲಿತ ಮತ್ತು ಮೇಲ್ವರ್ಗದ ವಿದ್ಯಾರ್ಥಿಗಳ ನಡುವೆ ಅಂತರ ಸೃಷ್ಟಿ ಮಾಡಿ ಕೋಮು ವಿಷಬೀಜ ಬಿತ್ತುತ್ತಿದೆ.
ದಲಿತ ಸಂಶೋಧನ ವಿದ್ಯಾರ್ಥಿ ಮುಂಬಯಿ ವಿಶ್ವವಿದ್ಯಾಲಯದ ರಾಮದಾಸ್, ಕರ್ನಾಟಕ ದೊಡ್ಡಬಸವರಾಜ ಕರ್ನಾಟಕ, ಗುಲ್ಬರ್ಗ ವಿಶ್ವವಿದ್ಯಾಲಯ ದಲ್ಲಿ ಸರ್ಕಾರ, ಆಡಳಿತದ ವಿರುದ್ಧ ಪ್ರಶ್ನೆ ಮಾಡಿದಕ್ಕೆ ಪಿಎಚ್ಡಿ ರದ್ದು ಮಾಡುವಂತೆ ನೋಟಿಸ್ ನೀಡಿತ್ತು. ಇದು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿದೆ. ಸಂವಿಧಾನ ವಿರೋಧಿಯಾಗಿದೆ. ಅದಕ್ಕಾಗಿ SFI ಬಿ.ಜೆ.ಪಿಯನ್ನು ರಿಜಕ್ಟ್ ಮಾಡುತ್ತಿದೆ ಎಂದು ನಿತೀಶ್ ನಾರಾಯಣ ಅವರು ಹೇಳಿದರು.

ಸಂಘಟನೆಯ ರಾಜ್ಯಾಧ್ಯಕ್ಷರ ಅಮರೇಶ ಕಡಗದ ಮಾತನಾಡಿ BJP ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಬಲವಂತವಾಗಿ ಒತ್ತಡ ಹಾಕಿ ಜಾರಿ ಮಾಡುತ್ತದೆ ಇದನ್ನು‌ SFI ಸಂಘಟನೆ ವಿರೋಧ ಮಾಡುತ್ತ ಬಂದಿದೆ BJP ಸರ್ಕಾರ ಕಳೆದ ಹತ್ತು ವರ್ಷದಲ್ಲಿ GDP ಯ ಕೆವಲ 0.45 ಮಾತ್ರ ಅನುದಾನ ಕೊಟ್ಟಿದೆ, ಖಾಸಗಿ ಹಾಗೂ ವಿದೇಶಿ ವಿಶ್ವವಿದ್ಯಾಲಯಗಲಿಗೆ ಮಾತ್ರ ಆದ್ಯತೆ ಕೊಡುತ್ತದೆ ಸರಕಾರಿ ವಿಶ್ವವಿದ್ಯಾಲಯಗಳನ್ನು ಕಡೆಗಣಿಸಿದೆ, ಮೂಲಭೂತ ಸೌಲಭ್ಯಗಳನ್ನು ಕೊಡುತ್ತ ಇಲ್ಲ, PHD ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡುತ್ತ ಇಲ್ಲ ಮತ್ತೆ ಖಾಸಗಿ ಕೋಟದಲ್ಲಿ ವೃತ್ತಿಪರ ಕೋರ್ಸ್ ಅಭ್ಯಾಸ ಮಾಡುತ್ತಿರವು ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನ ನಿರಾಕರಣೆ ಮಾಡಿದೆ ಈ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತ ಶಿಕ್ಷಣವನ್ನು ಸಂಪೂರ್ಣವಾಗಿ ಕಾರ್ಪೋಟ್ ಮಾಡುತ್ತದೆ, ಕರ್ನಾಟಕದಲ್ಲಿ ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣ ಮಾಡಿದಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್, ಅಂಬೇಡ್ಕರ್, ಬಸವಣ್ಣ, ಕನಕದಾಸ, ನಾರಾಯಣ ಇನ್ನಿತರ ಮಹಾನಾಯಕರಿಗೆ ಅಪಮಾನ ಮಾಡಿದನ್ನು ನಾವು ಕರ್ನಾಟಕದಲ್ಲಿ ನೋಡಿದ್ದವೆ ಅದೇ ರೀತಿಯಲ್ಲಿ ಕೇಂದ್ರ ಸರಕಾರ ತನ್ನ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಅನೇಕ ಪಠ್ಯ ಪುಸ್ತಕಗಳನ್ನು ಬದಲಾವಣೆಗೆ ಮುಂದಾಗಿದೆ ಸಂವಿಧಾನ ವಿರೋಧಿ ಕೆಲಸ ಮಾಡವು BJP ಪಕ್ಷವನ್ನು ಸೋಲಿಸಬೇಕು ಎಂದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿ‌ ಸದಸ್ಯ ಶಿವರಡ್ಡಿ, ಜಿಲ್ಲಾ ಅಧ್ಯಕ್ಷ ಬಸವರಾಜ ಗುಳ್ಳದಾಳ,ಹೊಸಪೇಟೆ ತಾಲ್ಲೂಕು ಉಪಾಧ್ಯಕ್ಷ ಪವನಕುಮಾರ, ಇತರರು ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

13 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

13 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

13 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

13 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

13 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

13 hours ago