ನವಲಿ: ಗ್ರಾಮದ ಶತವರ್ಷಗಳ ಹಳೆಯದಾದ ಮೌನೇಶ್ವರ ದೇವಸ್ಥಾನ ಜಿರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಕಾಂತಪ್ಪ ಕೆ, ನಿಂಗಪ್ಪ ಅವರು ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ಲಕ್ಷ್ಮಣ ಪತ್ತಾರ ಅವರಿಗೆ 50 ಸಾವಿರ ರೂಪಾಯಿಗಳ ಡಿಡಿಯನ್ನು ನೀಡಿದರು. ನಂತರ ಮಾತನಾಡಿದ ಕಾಂತಪ್ಪರವರು, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಪುರಾತನ ಹಾಗೂ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದೆ ನವಲಿ ಹೊಬಳಿ ವ್ಯಾಪ್ತೀಯ ಕೆರೆಗಳ ನಿರ್ಮಾಣ ಹಾಗೂ ದೇವಾಲಯಗಳ ಅಭಿವೃದ್ದಿಗೆ ಪೂಜ್ಯ ವಿರೇಂದ್ರ ಹೆಗ್ಡೆಯವರು ಸಹಾಯ ನೀಡಿದ್ದಾರೆ ಎಂದರು. ಕಾರಟಗಿ ತಾಲೂಕ ವಲಯದ ಮೇಲ್ವಿಚಾರಕ ಸಂಜು ಗೌಡರ್ ನವಲಿ ವಲಯದ ರತ್ನಮ್ಮ ತಳವಾರ , ನವಲಿ ವೀರಭದ್ರೇಶ್ವರ ಸಂಸ್ಥೆಯ ಮುಖ್ಯಸ್ಥ ಶಿವಯ್ಯ ಸ್ವಾಮಿ ನವಲಿ, ವಿಶ್ವಕರ್ಮ ಟ್ರಸ್ಟ್ನ ದೇಂದ್ರಪ್ಪ ಬಡಿಗೇರ, ಪುರುಶೋತ್ತಮ ಪತ್ತಾರ, ಮೌನೇಶ ಬಡಿಗೆರ ಕಾಳಪ್ಪ ಕಮ್ಮಾರ, ಮಂಜುನಾಥ ಈಚನಾಳ, ಗ್ರಾಮದ ಹಿರಿಯರು ಮುಖ್ಯಸ್ಥರು ಇದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…