193rd Birthday Celebration of Aksharadava Savitribai Pule on behalf of Nomadic Tribes Mahasabha Sangh.
ಗಂಗಾವತಿ: ನಗರದ ೩೧ನೇ ವಾರ್ಡ್ನಲ್ಲಿ ಬುಧವಾರ ಅಲೆಮಾರಿ ಸಮುದಾಯಗಳಿಂದ ನಮ್ಮ ಭಾರತ ದೇಶದ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ೧೯೩ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಗಂಗಾವತಿ ತಾಲೂಕು ಅಲೆಮಾರಿ ಸಮುದಾಯದ ಅಧ್ಯಕ್ಷರಾದ ಆರ್. ಕೃಷ್ಣ ರವರು ಈ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಮುಖ್ಯ ಅತಿಥಿಯಾಗಿ ಉಪನ್ಯಾಸಕರು ಹಾಗೂ ಚಿಂತಕರಾದ ಡಾ. ಸೋಮಕ್ಕ ಎಂ. ಮಾತನಾಡಿ ಅಲೆಮಾರಿ ಮಕ್ಕಳಿಗೆ ಸಾವಿತ್ರಿ ಬಾಪುಲೆಯವರ ಜೀವನದ ಕುರಿತು ವಿವರಿಸಿ, ಸಾವಿತ್ರಿಬಾಯಿ ಫುಲೆ ಭಾರತದಲ್ಲಿ ಮಹಿಳಾ ಶಿಕ್ಷಣದ ಜ್ಯೋತಿಯನ್ನು ಹೊತ್ತ ದಾರ್ಶನಿಕರಾಗಿದ್ದರು ಮತ್ತು ಅಂದಿನ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಕನಸು ಕಾಣುವ ಧೈರ್ಯ ಮತ್ತು ಬದಲಾವಣೆಗೆ ಶ್ರಮಿಸಿದರು. ೧೮೪೮ ರಲ್ಲಿ ಸಾವಿತ್ರಿಬಾಯಿ ಮತ್ತು ಜ್ಯೋತಿರಾವ್ ಅವರು ಪುಣೆಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು ಮತ್ತು ಸಾವಿತ್ರಿಬಾಯಿ ಭಾರತದ ಮೊದಲ ಮಹಿಳಾ ಶಿಕ್ಷಕರಾದರು. ಅದು ಅವರ ದಿಟ್ಟ ಹೆಜ್ಜೆಯಾಗಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ರಾಂತಿಕಾರಿ ಗಾಯಕಿಯಾದ ಕುಮಾರಿ ಚೈತ್ರಾ ಗಬ್ಬೂರು ಸಾವಿತ್ರಿ ಬಾಫುಲೆಯ ಬಗ್ಗೆ ಹಾಡನ್ನು ಹಾಡಿದರು.
ಈ ಸಂದರ್ಭದಲ್ಲಿ ಬಿ.ಎಸ್.ಪಿ ಮುಖಂಡ ಹುಲಿಗೇಶ್ ದೇವರಮನಿ, ಆರ್. ಚೆನ್ನಬಸವ, ಸಣ್ಣ ಹುಸೇನಪ್ಪ ಹಂಚಿನಾಳ, ಅಲೆಮಾರಿ ಸಮುದಾಯದ ಕುಲ ಪಂಚಾಯತಿ ನ್ಯಾಯಾಧೀಶರು ಅಶ್ವ ರಾಮಣ್ಣ, ಅಲೆಮಾರಿ ಸಮುದಾಯದ ಮುಖಂಡರು ನಾಗಪ್ಪ, ಕೋಟ ಯಲ್ಲಪ್ಪ, ಮಂಜುನಾಥ ಚನ್ನದಾಸರ್ ಇನ್ನು ಮುಂತಾದವರು ಹಾಜರಿದ್ದರು.
ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…
ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…
ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್ ನಲ್ಲಿ…
ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…
ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…