ಕಲ್ಯಾಣಸಿರಿ ವಿಶೇಷ

ಗಂಗಾವತಿಯವಿದ್ಯಾನಗರದಲ್ಲಿ ರೈತನ ಆತ್ಮಹತ್ಯೆ.

Farmer’s suicide in Vidyanagar, Gangavati.

ಗಂಗಾವತಿ: ನಗರದ ರಾಯಚೂರು ರಸ್ತೆಯ ವಿದ್ಯಾನಗರದ ನಿವಾಸಿ ಬಸವರಾಜ @ ಬಸಪ್ಪ (೫೩) ಎಂಬ ರೈತ ಸರಿಯಾಗಿ ಬೆಳೆ ಬಾರದೇ, ಸಾಲಬಾಧೆಯಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸದರಿಯವರಿಗೆ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳಿದ್ದು, ಅವರ ಸಾವಿನಿಂದ ಕುಟುಂಬ ಅನಾಥವಾಗಿದೆ.
ಬಸವರಾಜ @ ಬಸಪ್ಪ ಇವರು ತಮ್ಮ ಸಹೋದರ ಸಂಗಪ್ಪ ಎಂಬುವವರ ಹೆಸರಿನಲ್ಲಿದ್ದ ೦೪ ಎಕರೆ ೩೭ ಗುಂಟೆ ಜಮೀನಿನ ಮೇಲೆ ಆಕ್ಸಿಸ್ ಬ್ಯಾಂಕ್‌ನಲ್ಲಿ ೪.೩೭ ಲಕ್ಷ ಸಾಲ ಮಾಡಿದ್ದು, ಅಲ್ಲದೇ ಶ್ರೀ ಧರ್ಮಸ್ಥಳ ಮಂಜುನಾಥ ಗುಂಪಿನಲ್ಲಿ ೩ ಲಕ್ಷ ಸಾಲ ಪಡೆದುಕೊಂಡಿದ್ದು, ಆದರೆ ಸರಿಯಾಗಿ ಮಳೆ ಬರದೆ ಇದ್ದುದರಿಂದ ಬಿತ್ತನೆ ಮಾಡಿದ ಬೆಳೆ ಕೈಗೆ ಸಿಗದೇ ಆರ್ಥಿಕವಾಗಿ ತೀವ್ರವಾಗಿ ಹಿನ್ನಡೆ ಅನುಭವಿಸಿ, ಸಾಲದ ಕಿರುಕುಳದಿಂದ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ಡಿಸೆಂಬರ್-೨೩ ರಂದು ಇಲಿ ಪಾಷಾಣ ಸೇವಿಸಿದ್ದರು, ಅವರನ್ನು ಗಂಗಾವತಿ ಸರಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿರುತ್ತಾರೆ.
ಸದರಿಯವರ ಆತ್ಮಹತ್ಯೆ ಕುರಿತು ಅವರ ಅಳಿಯನಾದ ರವಿಕುಮಾರ ಎಂಬುವವರು ಗಂಗಾವತಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿರುತ್ತದೆ.

Mallikarjun

Share
Published by
Mallikarjun

Recent Posts

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ

ತಂದೆಯ ಋಣ ತೀರಿಸಲು ..ಎಷ್ಟೇ ಜನ್ಮ ಹುಟ್ಟಿ ಬಂದರೂ ಸಾಧ್ಯವಿಲ್ಲ No matter how many births you take,…

2 minutes ago

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

19 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

20 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

20 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

20 hours ago