ಕಲ್ಯಾಣಸಿರಿ ವಿಶೇಷ

ಬೋದಿಸತ್ವವು ಅಂಬೇಡ್ಕರ್ ರವರು ಸಮಾಜಕ್ಕೆ ಹಾಕಿಕೊಟ್ಟ ಬುನಾದಿ.

Bodhisattva is the foundation laid by Ambedkar for the society.


ವರದಿ : ಬಂಗಾರಪ್ಪ ಸಿ ಹನೂರು.
ಹನೂರು :-ಬೋದಿಸತ್ವ ಡಾ ಬಾಬಾಸಾಹೇಬ್ ಅಂಬೇಡ್ಕರ್ ರವರು ಸ್ಥಾಪನೆ ಮಾಡಿರುವ ಭಾರತೀಯ ಬೌದ್ಧ ಮಹಾ ಸಭಾ ಕರ್ನಾಟಕ ರಾಜ್ಯ( ರಿ) ಸಂಘಟನೆ ವತಿಯಿಂದ ನಾವು ಬೌದ್ಧ ಭಾರತಕ್ಕಾಗಿ ಸಂಗಟಿಸೋಣ ಕಾರ್ಯಕ್ರಮವು ಹನೂರು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿತು.
ದೀಪ ಬೆಳಗಿಸುವುದರ ಜೊತೆಗೆ ಪಂಚಶೀಲ ಪಟಿಸುವುದರ ಮೂಲಕ ಕಾರ್ಯಕ್ರಮವನ್ನು ಅತೀಥಿಗಳು ಉದ್ಘಾಟಿಸಿದರು.ಕಾರ್ಯಕ್ರಮ ಕುರಿತು ಮಾತನಾಡಿದ ಭಾರತೀಯ ಬೌದ್ಧ ಮಹಾ ಸಭಾ ಕರ್ನಾಟಕ ಯುವ ರಾಜ್ಯದಕ್ಷ ದರ್ಶನ್ ಸೋಮಶೇಖರ್ ಡಾ ಬಿ ಆರ್ ಅಂಬೇಡ್ಕರ್ ರು ಕನಸು ಕಂಡತ ಪ್ರಬುದ್ಧ ಭಾರತಕ್ಕಾಗಿ ನಾನು ಸದಾ ದುಡಿಯಲು ಸಿದ್ದನಿದ್ದೇನೆ ರಾಜ್ಯದ ಯುವ ಸಮೂಹವನ್ನು ಉತ್ತಮ ಬೆಳವಣಿಗೆಯತ್ತ ಕೊಂಡೋಯ್ಯೋ ಕೆಲಸವನ್ನು ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಂದು ಹೇಳಿದರು.
ಹಾಗು ಹಿಂದೂಗಳು ದೇವಸ್ಥಾನಕ್ಕೆ ಹೋಗುತ್ತಾರೆ ಕ್ರಿಶ್ಚಿಯನ್ನರು ಚರ್ಚ್ ಗೆ ಹೋಗುತ್ತಾರೆ. ಮುಸಲ್ಮಾನರು ಮಸೀದಿಗೆ ಹೊಗುತ್ತಾರೆಯೋ ಅದೇ ರೀತಿ ದೇಶದ ಬಹುಜನರು ಬೌದ್ಧ ವಿಹಾರಗಳಿಗೆ ತೆರಳಬೇಕು ಭಗವಾನ್ ಬುದ್ಧರು ಬೋದಿಸಿದ ಪಂಚಾಶೀಲಗಳನ್ನು ಅಳವಡಿಸಿಕೊಂಡು ನಾವು ಉತ್ತಮವಾದ ಪ್ರಬುದ್ಧ ಭಾರತ ನಿರ್ಮಾಣ ಮಾಡಬೇಕು.ದಾರ್ಮಿಕವಾಗಿ ಕ್ರಿಶ್ಚಿಯನ್ ರಾಷ್ಟ್ರಗಳಿವೆ ಧರ್ಮದ ರೂಢಿ ಸಂಪ್ರದಾಯದಂತೆ ರಾಜ್ಯ ಹಾಳುತ್ತಿವೆ ಆಗೆಯೇ ಮುಸ್ಲಿಂ ರಾಷ್ಟ್ರಗಳು ತಮ್ಮ ಧರ್ಮಸಂಸ್ಕೃತಿಯಂತೆ ರಾಜಕೀಯ ಅಧಿಕಾರ ಮಾಡುತ್ತಿವೆ ನಮ್ಮ ಭಾರತ ದೇಶ ಬುದ್ಧರ ಕಾರಣಕ್ಕಾಗಿ ಜಗಪ್ರಸಿದ್ದಿಯಾಗಿದ್ದರು ಸಹ ಬ್ರಾಹ್ಮಣ ಸ್ಮೃತಿಗಳು ಭಾರತವನ್ನು ಆಳುತ್ತಿವೆ ಭಾರತೀಯರಾದ ನಾವು ಬೌದ್ಧ ಧರ್ಮದ ಆದರ್ಶಗಳನ್ನು ರೂಡಿ ಮತ್ತು ಸಂಪ್ರದಾಯಗಳ ಮೂಲಕ ಒಂದು ರಾಷ್ಟ್ರೀಯ ದಮ್ಮ ಶಕ್ತಿಯಾಗಿ ಬೆಳೆಯಬೇಕಿದೆ ಏಕೆಂದರೆ ಅಬ್ರಾಹ್ಮಣರಾದ ನಾವು ಈ ದೇಶದ ಮೂಲ ನಿವಾಸಿಗಳಾಗಿದ್ದೇವೆ ಇದನ್ನು ಬಾಬಾಸಾಹೇಬರೇ ತಿಳಿಸಿದ್ದಾರೆ ಜಗತ್ತಿನ ಜ್ಞಾನಿ ಅವರೇ ಆಗಿರುವುದರಿಂದ ಬುದ್ಧರ ತತ್ವದರ್ಶಗಳಂತೆ ಜಗತ್ತನ್ನು ದುಃಖ್ಖದಿಂದ ಸುಖ ಜೀವನದ ಕಡೆಗೆ ಕೊಂಡೋಯ್ಯುವ ಕಾರ್ಯವನ್ನು ಹನೂರಿನಿಂದಲೇ ಪ್ರಾರಂಭಿಶೋಣ ಎಂದರು ಕರ್ನಾಟಕ ರಾಜ್ಯದಲ್ಲಿ ಯುವ ಬೌದ್ಧ ಸಮಾಜದ ಘಟಕವನ್ನು ಬಲಪಡಿಸಿ ಸಂಘಟನೆ ಮಾಡುವಂತೆ ಭಾರತೀಯ ಬೌದ್ಧ ಸಮಾಜದ ರಾಷ್ಟ್ರೀಯ ಕಾರ್ಯದಕ್ಷರಾದ ಭೀಮರಾವ್ ಯಸ್ವಂತ ರಾವ್ ಅಂಬೇಡ್ಕರ್ ರವರು ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿನೆ ಎಂದು ತಿಳಿಸಿದರು.

ಇದೆ ವೇಳೆ ಮಾತನಾಡಿದ ಶಿಕ್ಷಕ ನಾಗರಾಜು ಉತ್ತಂಬಳ್ಳಿ ರವರು 1954 ರಲ್ಲಿ ಅಂಬೇಡ್ಕರ್ ರವರು ಸ್ಥಾಪನೆ ಮಾಡಿದಂತ ಈ ಭಾರತೀಯ ಬೌದ್ಧ ಮಹಾಸಭಾ ಸಂಘಟನೆಯು ಇಲ್ಲಿತನಕ 69 ವರ್ಷ ಕಳೆದಿದೆ ಆದರೂ ಕೂಡ ಪ್ರಬುದ್ಧ ಭಾರತದ ಕನಸು ಹಾಗೆ ಉಳಿದಿದೆ ದೇಶಕ್ಕೆ ಅಂಬೇಡ್ಕರ್ ರರು ಕೊಟ್ಟಂತಹ ಸಂವಿಧಾನ ಎಷ್ಟು ಮುಖ್ಯವೊ. ಭಾರತೀಯ ಬೌದ್ಧ ಮಹಾ ಸಭಾನು ಕೂಡ ಅಷ್ಟೇ ಮುಖ್ಯ ಆಗಾಗಿ ಈಗಿನ ಯುವ ಪೀಳಿಗೆ ಬೌದ್ಧ ದಮ್ಮವನ್ನು ಅರ್ಥಮಾಡಿಕೊಳ್ಳಬೇಕು ಅಂಬೇಡ್ಕರ್ ರವರು ತೋರಿದ ಸಮಾನತೆ ಸೋದರತೆ ಬಾತೃತ್ವದ ದಮ್ಮವನ್ನು ನಾವುಗಳು ಪಾಲಿಸಿ ಅನುಸರಿಸಬೇಕು ಬೌದ್ಧ ದಮ್ಮದಿಂದ ಮಾತ್ರ ಇಡೀ ದೇಶದ ಅಭಿವೃದ್ಧಿ ಸಾಧ್ಯ ಪ್ರತಿಯೊಬ್ಬರಿಗೂ ಸ್ಥಾನ ಮಾನ ಗೌರವ ಸಿಗುತ್ತದೆ ಆದ್ದರಿಂದ ಯುವಕರು ಬುದ್ಧರ ಚಿಂತನೆಗಳನ್ನು ಅಳವಡಿಸಿಕೊಂಡು ಬಾಬಾಸಾಹೇಬರ ಮಾರ್ಗದಲ್ಲಿ ನಡೆಯಿರಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಕೀಲರು ಶ್ರೀನಿವಾಸ್. ಶಿವರಾಜು. ಬಿ ಆರ್ ಕೃಷ್ಣಯ್ಯ. ನಂಜುಂಡಸ್ವಾಮಿ.ಬಾನು ಪ್ರಸಾದ್ . ವರುಣ್. ಪ್ರಕಾಶ್. ನಾಗರಾಜು. ಹನೂರು ತಾಲೂಕಿನ ವಿವಿಧ ಗ್ರಾಮದ ಯುವಕರುಗಳು ಮುಖಂಡರು ಸೇರಿದಂತೆ ಬೌದ್ಧನುಯಾಯಿಗಳು ಉಪಸ್ಥಿತರಿದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

18 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

18 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

18 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

18 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

18 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

18 hours ago