ಕಲ್ಯಾಣಸಿರಿ ವಿಶೇಷ

ಜೀವನದಲ್ಲಿಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಿ—ಬಸವಲಿಂಗೇಶ್ವರ ಶಿವಾಚಾರ್ಯರು

Embrace spirituality in life – Basavalingeswara Shivacharya

ಯಲಬುರ್ಗಾ,:ಆಧ್ಯಾತ್ಮಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಬದುಕು ಸೂತ್ರವಿಲ್ಲದ ಗಾಳಿಪಟದಂತೆ ದಿಕ್ಕುತೋಚದಂತೆ ದುಸ್ತರ ವಾಗುತ್ತದೆ ಎಂದು ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಷ್ಟಗಳು ಬಂದರೆ ಹೆದರಬೇಡಿ ಅವುಗಳನ್ನು ಎದುರಿಸುವ ಶಕ್ತಿ ನಿಮಗೆ ಬರುತ್ತದೆ . ಯಾವದಕ್ಕೂ ಧ್ರತಿಗೆಡದೆ ಬಾಳಲ್ಲಿ ಏನೇ ಬರಲಿ ಅದನನ್ನು ಸ್ವೀಕರಿಸುವ ಮೂಲಕ ಬದುಕನ್ನು ಮುನ್ನೇಡೆಸಿಕೊಂಡು ಹೋದರೆ ಅದೆ ಬಂಗಾರದ ಬದುಕು ಆಗಬಲ್ಲದು ಎಂದರಲ್ಲದೇ ಕರಮುಡಿ ಗ್ರಾಮದಲ್ಲಿ ಆಗಾಗ್ಗೆ ಹಲವಾರು ಜಾಗ್ರತಿ ಕಾರ್ಯಕ್ರಮಗಳು ಜರುಗತ್ತಲೇ ಇರುತ್ತವೆ ಅವುಗಳನ್ನು ಸದುಪಯೋಗಪಡಿಸಿಕೊಂಡು ಒಳ್ಳೆ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರುˌ
ವೀರುಪಾಕ್ಷಪ್ಪ ಉಳ್ಳಾಗಡ್ದಿ ˌ ಗಂಗಪ್ಪ ಹವಳಿ ಅವರು ಮಾತನಾಡಿ ನಮ್ಮಲ್ಲಿ ಯಾವುದೇ ಕಾರ್ಯಕ್ರಮಗಳು ಜರುಗಿದರು ಯಶಸ್ಸು ಖಂಡಿತ ಇರುತ್ತದೆ ಅದಕ್ಕೆ ಸಮಸ್ತ ಗ್ರಾಮಸ್ತರು ಕೊಡುವ ಸಹಕಾರ ಅಪಾರವಾಗಿದೆ ಎಂದರು.
ಗಜಗಿನಹಾಳದ ವೀರೇಶ ಶಾಸ್ತ್ರಿಗಳು ವೀರಭದ್ರೇಶ್ವರ ಮಹಿಮೆಯನ್ನು ಮನಮುಟ್ಟವಂತೆ ತಿಳಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ ˌ ವೀರಭದ್ರಯ್ಯ ಕೆಂಬಾವಿಮಠ ರವರ ಸುಶ್ರಾವ್ಯ ಸಂಗೀತವು ಮುದು ನೀಡಿತು.
ಶಕುಂತಲಾ ಪಾಟೀಲ ˌ ಶರಣಗೌಡ ಪೋ.ಪಾಟೀಲ ˌ ಚನ್ನಬಸಪ್ಪ ಗೊಂಗಡಶೆಟ್ಟಿ ! ಬಸವರಾಜ ಬಲಕುಂದಿ ˌ ಉಮೇಶ ಕುಕನೂರ ˌ ಮರ್ಧಾನಸಾಬ ಮುಲ್ಲಾ ˌ ವೀರಣ್ಣ ಪಟ್ಟೇದ ˌ ಕಳಕಪ್ಪ ಬೆಟಗೇರಿ ಇನ್ನೀತರರು ಉಪಸ್ಥಿತರಿದ್ದರು.
ದಾಸೋಹ ಸೇವೆ ನಿರ್ವಹಿಸಿದ ಬಟಗೇರಿ ಒಣಿಯ ಹಿರಿಯರನ್ನು ಸನ್ಮಾನಿಸಲಾಯಿತು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

16 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

16 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

17 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

17 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

17 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

17 hours ago