ಕಲ್ಯಾಣಸಿರಿ ವಿಶೇಷ

ಡಿ.16ಕೆ.ಆರ್.ಪೇಟೆಯಲ್ಲಿ ಸ್ವರ್ಣ ಪುರಸ್ಕಾರ: ಸ್ವರ್ಣ ಟೀವಿ ಮುಖ್ಯಸ್ಥ ಕಬ್ಬನಹಳ್ಳಿ ಶಂಭು

D. 16 Golden Award in KR Pete: Golden TV Head Kabbanahalli Shambhu

*ಕೆ.ಆರ್.ಪೇಟೆ ವರದಿ: ಮಂಡ್ಯ ಜಿಲ್ಲೆಯ
ಸ್ವರ್ಣ ವಾಹಿನಿಯ “ಸ್ವರ್ಣ ಪುರಸ್ಕಾರ ಸಾಂಸ್ಕೃತಿಕ ಸಂಭ್ರಮ”ಕಾರ್ಯಕ್ರಮವು ಇದೇ ಡಿ.16ರಂದು ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಾಲೆಯ ಆವರಣದಲ್ಲಿ ಅದ್ದೂರಿ ವರ್ಣರಂಜಿತ ವೇದಿಕೆಯಲ್ಲಿ ನಡೆಯಲಿದೆ ಎಂದು ಸ್ವರ್ಣ ವಾಹಿನಿಯ ಮುಖ್ಯಸ್ಥ ಕಬ್ಬನಹಳ್ಳಿ ಶಂಭು ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿ ತಾಲ್ಲೂಕಿನ ಸಾಧಕರಿಗೆ ವಾಹಿನಿ ವತಿಯಿಂದ ಸ್ವರ್ಣ ಪುರಸ್ಕಾರ ನೀಡಲಿದ್ದು ಮಾಜಿ ಸ್ಪೀಕರ್ ದಿ|| ಕೃಷ್ಣರವರಿಗೆ ಹಾಗೂ ವೀರಯೋಧ ದಿ|| ಜನಾರ್ಧನ್ ಕಿಕ್ಕೇರಿರವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣಗೌಡ, ಕೃಷಿ ಮತ್ತು ಸಾಮಾಜಿಕ ಹೋರಾಟಕ್ಕೆ ಕೆ.ಎಸ್.ನಂದಿನಿ ಜಯರಾಂ, ಸಿನಿಮಾ ವಿಭಾಗದಿಂದ ಕೆ.ಆ‌ರ್.ಪೇಟೆಯ ಅರವಿಂದರಾವ್ ಹಾಗೂ ಕೆ.ಆರ್.ಪೇಟೆ ಶಿವರಾಜು, ಸಾಮಾಜಿಕ ಸೇವೆಗೆ ಮಾರಪ್ಪರವರನ್ನು ಆಯ್ಕೆ ಮಾಡಲಾಗಿದ್ದು

ಪ್ರೇಕ್ಷಕರನ್ನು ರಂಜಿಸಲು ಕಾಮಿಡಿ ಕಿಲಾಡಿಗಳು ತಂಡದ ದೀಪಿಕಾ, ಪ್ರವೀಣ್ ಜೈನ್, ಮನೋಹರ್ ಗೌಡ ಸೇರಿದಂತೆ ಪ್ರಸಿದ್ಧ ಚಲನಚಿತ್ರ ನಟನಟಿಯರು ಭಾಗವಹಿಸಲಿದ್ದು ಹೆಸರಾಂತ ಗಾಯಕ, ಗಾಯಕಿಯರು ಭರಪೂರ ಮನರಂಜನೆ ನೀಡಲಿದ್ದಾರೆ. ಇದರ ಜೊತೆಗೆ ಸೈ ಡ್ಯಾನ್ಸ್ ಗ್ರೂಪ್ ವತಿಯಿಂದ ಅದ್ಧೂರಿ ಡ್ಯಾನ್ಸ್ ಆಯೋಜನೆ ಮಾಡಲಾಗಿದೆ ತಾಲ್ಲೂಕಿನ ಎಲ್ಲಾ ಜನತೆಯು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ವರ್ಣ ವಾಹಿನಿಯ ಮುಖ್ಯಸ್ಥ ಕಬ್ಬನಹಳ್ಳಿ ಶಂಭು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಮನು, ರಘು, ಇತರರು ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

19 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

19 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

19 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

19 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

19 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

20 hours ago