ಕಲ್ಯಾಣಸಿರಿ ವಿಶೇಷ

ಲಿಂಗದಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದುರಗಪ್ಪ ಕಡಗದ ಅಧ್ಯಕ್ಷರಾಗಿ ಆಯ್ಕೆ

Lingadahalli: Duragappa Kadaga has been elected as the President of Primary Agriculture Farmers Cooperative Society
  

ಕುಷ್ಟಗಿ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು , ಲಿಂಗದಹಳ್ಳಿ, ವಿರುಪಾಪುರ, ಹೊಮ್ಮಿನಾಳ,ಹೊನ್ನಗಡ್ಡಿ, G.H, ಕ್ಯಾಂಪ್, ಹುಲಿಯಾಪುರ, ಸಿದ್ದಾಪುರ, ಹಡಗಲಿ, ಹಿರೇ ಮುರ್ಕತನಾಳ, ನೀರಲೂಟಿ ಗ್ರಾಮಗಳನ್ನು ಒಳಗೊಂಡ ಲಿಂಗದಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಟ್ಟು 12 ಜನ ನಿರ್ದೇಶಕರು ದಿನಾಂಕ 22/7/2023 ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಅಧಿಕಾರಿಗಳು ದಿನಾಂಕ ನಿಗಿದಿ ಮಾಡಿದ್ದರು ಅಧ್ಯಕ್ಷ ಸ್ಥಾನಕ್ಕೆ ಲಿಂಗದಹಳ್ಳಿ ಗ್ರಾಮದ ದುರಗಪ್ಪ ತಂದೆ ಬಾಲನಗೌಡ ಕಡಗದ ನಾಮಪತ್ರ ಸಲ್ಲಿಸಿದರು ಉಪಾಧ್ಯಕ್ಷ ಸ್ಥಾನಕ್ಕೆ ಹಿರೇಮುರ್ಕತನಾಳ ಗ್ರಾಮದ ನಿಂಗಪ್ಪ ತಂದೆ ಬಸಪ್ಪ ಬಂಡಿ ನಾಮಪತ್ರ ಸಲ್ಲಿಸಿದರು ಒಟ್ಟು 12 ಜನ ನಿರ್ದೇಶಕರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರೂ ಎಂದು ಚುನಾವಣಾ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಪೀರಸಾಬ ಎ ನದಾಫ್ ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಗಳಾದ ಯಲ್ಲಪ್ಪ ಇದ್ಲಾಪುರ, ಅಮರೇಶ ಬೆಂಕಿ, ಕನಕಪ್ಪ, ಶಾಂತಮ್ಮ, ಬಾಳಮ್ಮ ಮರಳಿ ಹುಲಿಯಾಪುರ, ಬಸಪ್ಪ ಕೋಮಲಾಪುರ, ಶೇಖರಪ್ಪ ಹೊಮ್ಮಿನಾಳ, ಹನುಮಂತಪ್ಪ ನೀರಲೂಟಿ, ದೊಡ್ಡಪ್ಪ ದಾಯಪುಲ್ಲೆ ಸೇರಿದಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಹನುಮನಗೌಡ ಹಾಗೂ ಗ್ರಾಮದ ಪ್ರಮುಖರಾದ ಪರಶುರಾಮ ಗೌಡ್ರ, ಮರಿಯಪ್ಪ ವಕೀಲರು, ಗುಂಡಪ್ಪ ಮೂಲಿನಮನಿ, ಲಿಂಗದಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಂಚಪ್ಪ, ಗಂಗಾಧರಯ್ಯ, ಯಮನೂರ ಎಮ್ಮಿ, ಕರೇಗೌಡ, ಯಮನೂರ ಕಡಗದ, ಇತರರು ಇದ್ದರು.

Mallikarjun

Share
Published by
Mallikarjun

Recent Posts

ಮೆಂತ್ಯ ಸೊಪ್ಪು

ಮೆಂತ್ಯ ಸೊಪ್ಪು Fenugreek ಮಾರ್ಕೆಟ್ ಇಂದ ಮೆಂತ್ಯ ಸೊಪ್ಪನ್ನು ಜಾಸ್ತಿ ತಂದಾಗ ಅದನ್ನು ಬಿಡಿಸಿ ಚೆನ್ನಾಗಿ ತೊಳೆದು ನಂತರ ಮೆಂತ್ಯ…

8 hours ago

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ?

ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿದರೆ ಏನು ಉಪಯೋಗ? What is the benefit of drinking…

8 hours ago

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ – ಗ್ರಾಮಸ್ಥರ ವಿರೋಧ

ಪ್ರಭಾವಿಗಳಿಂದ ಸರ್ಕಾರಿ ಗೋಮಾಳ ಅತಿಕ್ರಮಿಸುವ ಹುನ್ನಾರ - ಗ್ರಾಮಸ್ಥರ ವಿರೋಧ Influential people planning to encroach on government…

8 hours ago

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ ಅಹೋರಾತ್ರಿ ಪ್ರತಿಭಟನೆ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾ. 16 ರಂದು ಫ್ರೀಡಂ ಪಾರ್ಕ್‌ ನಲ್ಲಿ…

8 hours ago

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್

ಬಾಲ್ಯ ವಿವಾಹ ತಡೆಗೆ ಎಲ್ಲರ ಪಾತ್ರ ಬಹು ಮುಖ್ಯ- ನ್ಯಾ. ಮಹಾಂತೇಶ ದರಗದ್ Everyone's role is very important…

8 hours ago

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್

ಮಾಹಿತಿ ನೀಡಲು ವಿಳಂಬ ಮಾಡಿದ ಗ್ರಾಪಂ ಅಧಿಕಾರಿಗಳಿಗೆ 50 ಸಾವಿರ- ಬಿ. ವೆಂಕಟಸಿಂಗ್ 50 thousand to gram panchayat…

8 hours ago